ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ಸಂಘದ ಅಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ ಉದ್ಘಾಟಿಸಿದರು. 
ವಿಜಯನಗರ

ಸಂಘಟನೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ

ಅಶೋಕ್ ಕುಮಾರ್ ಎನ್
ಕಾನಹೊಸಹಳ್ಳಿ: ಸರ್ಕಾರಗಳ ಕಾರ್ಪೊರೇಟ್ ನೀತಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಹೇಳಿದರು.
ಹುಲಿಕೆರೆ, ರಂಗನಾಥನಹಳ್ಳಿ, ಇಮಡಾಪುರ ಗ್ರಾಮದಲ್ಲಿ ಸಂಘದ ಗ್ರಾಮ ಘಟಕಗಳನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ರೈತ ಸಂಘಟನೆಗಳ ಅಗತ್ಯವಾಗಿದ್ದು, ಸಂಘಟನೆಗಳು ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಊರುಗಳಲ್ಲಿ ರೈತ ಸಂಘದ ಘಟಕಗಳು ಆರಂಭವಾಗಬೇಕು. ಈ ಮೂಲಕ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ರೈತರು ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗಳಿಗೆ ಅಲೆದಾಡುವುದಕ್ಕಿಂತ ಸಂಘಟನೆಯ ಮೂಲಕ ಪರಿಹರಿಸಿಕೊಳ್ಳಬಹುದು ಎಂದರು.
ತಾಲೂಕು ಅಧ್ಯಕ್ಷ ಹುಲಿಕೆರೆ ಜೆ.ಮಾರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪರುಶುರಾಮ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ವಿಜಯನಗರ ಜಿಲ್ಲಾಧ್ಯಕ್ಷ ಬಣಕಾರ ಬಸವರಾಜಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಡಿ.ದೇವೇಂದ್ರ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಬಿ.ಶೇಖರಪ್ಪ, ಶಾಂತಪ್ಪ, ಎಂ.ಮಾಂತೇಶ್, ಪ್ರಮುಖರಾದ ಗುರುಸಿದ್ದಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ, ದ್ಯಾಮಜ್ಜಿರ ಹನುಮಂತಪ್ಪ, ಪಿ.ಗಂಗಾಧರಪ್ಪ, ರಂಗನಾಥನಹಳ್ಳಿ ನಾಗರಾಜ್, ರೈತ ಪ್ರಮುಖರಾದ ಬಿ.ತಮ್ಮಪ್ಪ, ರುದ್ರಮುನಿ ಇದ್ದರು.