ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಟಿçÃಯ ಹೆದ್ದಾರಿ 50ರಲ್ಲಿ ಟ್ರಾಕ್ಸ್ ಪಲ್ಟಿಯಾಗಿರುವುದು.
ಹೊಸಪೇಟೆ: ಮರಿಯಮ್ಮನಹಳ್ಳಿ ಕೆಪಿಟಿಸಿಲ್ ಕಚೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಿಯಂತ್ರಣ ತಪ್ಪಿ ಟ್ರಾಕ್ಸ್ ಪಲ್ಟಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಆರು ಜನರಿಗೆ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಗೋವಿನಕೊಪ್ಪ ಹಾಗೂ ಕೊಣ್ಣೂರು ಗ್ರಾಮದ ಡ್ರಮ್ ಸೆಟ್ ಬಾರಿಸುವ ಕಲಾವಿದರಾದ ಕುಮಾರ್, ಅನ್ನಪೂರ್ಣ, ಟ್ರಕ್ ಚಾಲಕ ಲಾಲ್ ಸಾಬ್, ಬಾಲಕಿಯರಾದ ರಕ್ಷಿತ, ಅಕ್ಕಮ್ಮ, ನಂದಿನಿ ಅವರಿಗೆ ಗಾಯಗಳಾಗಿವೆ. ನಗರದ ಉಪವಿಭಾಗಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
13 ಜನ ಡ್ರಮ್ ಸೆಟ್ ಬಾರಿಸುವ ಕಲಾವಿದರು ಮಡಿಕೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ವಾಪಾಸ್ ತೆರಳಿದ್ದರು. ಶುಕ್ರವಾರ ಹುನುಗುಂದದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ರಾಷ್ಟಿçÃಯ ಹೆದ್ದಾರಿ ಬದಿ ನಿಂತಿದ್ದ ಲಾರಿಯೊಂದು ರಸ್ತೆ ತಿರುವು ಪಡೆಯುವ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಟ್ರಾಕ್ಸ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತ ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಕ್ರಮಕೈಗೊಂಡಿದ್ದಾರೆ.