ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ದೇವರಾಜ ಅರಸು ಅವರ ದೀರ್ಘಾವಧಿ ಆಡಳಿತದ ದಾಖಲೆ ಸರಿಗಟ್ಟಿದ ಹಿನ್ನೆಲೆಯಲ್ಲಿ ಬೋರನಹಳ್ಳಿ ಮತ್ತು ಸುಟ್ಟಕೋಡಿಹಳ್ಳಿ ಗ್ರಾಮದ ಸಿದ್ದರಾಮಯ್ಯ ಅಭಿಮಾನಿಗಳು ಸಮೀಪದ ಕ್ರಾಸ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.  
ವಿಜಯನಗರ

ಎಲ್ಲ ವರ್ಗದವರ ಆಶಾಕಿರಣ ಸಿದ್ದರಾಮಯ್ಯ

ಕೊಟ್ಟೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಡಿ.ದೇವರಾಜ ಅರಸು ದಾಖಲೆ ಸರಿಗಟ್ಟಿದ ಹಿನ್ನೆಲೆಯಲ್ಲಿ ಬೋರನಹಳ್ಳಿ ಮತ್ತು ಸುಟ್ಟಕೋಡಿಹಳ್ಳಿ ಗ್ರಾಮದ ಸಿದ್ದರಾಮಯ್ಯ ಅಭಿಮಾನಿಗಳು ಗ್ರಾಮದ ಸಮೀಪದ ಕ್ರಾಸ್‌ನಲ್ಲಿ ಮಂಗಳವಾರ ಸಿಎಂ ಭಾವಚಿತ್ರಕ್ಕೆ ಹಾಲು ಹಾಕಿ, ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರ್ಣಗೊಳಿಸಲಿ ಎಂದು ಆಶಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂಗಪ್ಪ ಮಾತನಾಡಿ, ಹಿಂದುಳಿದ ಸಮುದಾಯದ ಡಿ.ದೇವರಾಜು ಅರಸು ದಾಖಲೆಯನ್ನು, ಹಿಂದುಳಿದ ವರ್ಗದವರೇ ಆದ ಸಿದ್ದರಾಮಯ್ಯ ಸರಿಗಟ್ಟಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಆದರೆ, ಸಿದ್ದರಾಮಯ್ಯ ಎಲ್ಲ ಸಮುದಾಯಗಳ ಆಶಾಕಿರಣವಾಗಿದ್ದಾರೆ ಎಂದರು. ಪ್ರಮುಖರಾದ ಆನಂದಪ್ಪ, ಕೆ.ಸುರೇಶ, ಅಣಜಿ ಕೊಟ್ರೇಶ, ಜಾಲಿ ಹಾಲೇಶ ಮುಂತಾದವರಿದ್ದರು.