ಪತ್ರಿಕಾಭವನದಲ್ಲಿ ಕೃಷ್ಣಕವಿ ರಂಗೋಪAತ ನಾಗರಾಜರಾಯ ಅವರು 50 ವರ್ಷದ ಹಿಂದಿನ ಗ್ರಂಥ ತೋರಿಸಿದರು. 
ವಿಜಯನಗರ

ಶ್ರೀಕೃಷ್ಣ ಲೀಲಾಮೃತ ಮಹಕಾವ್ಯಂ ಲೋಕಾರ್ಪಣೆ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ರಾಘವೇಂದ್ರ ಹೇಳಿಕೆ
ಹೊಸಪೇಟೆ: ಕೃಷ್ಣ ಕವಿ ರಂಗೋಪAತ ನಾಗರಾಜರಾಯ ಅವರು 50 ವರ್ಷಗಳ ಹಿಂದೆ ಬರೆದ ಶ್ರೀಕೃಷ್ಣ ಲೀಲಾಮೃತ ಮಹಾಕವ್ಯಾಂ ಗ್ರಂಥ ಲೋಕಾರ್ಪಣೆ ಡಿ.28ರಂದು ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬಿಡುಗಡೆ ಆಗಲಿದೆ ಎಂದು ಉಪನ್ಯಾಸಕ ರಾಘವೇಂದ್ರ ತಿಳಿಸಿದರು.
ನಗರದ ಪ್ರತಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಂಗೋಪAತ ನಾಗರಾಜರಾಯ ಅವರು 16 ವರ್ಷಗಳ ಕಾಲ ಭಗವಾನ್ ಶ್ರೀ ಕೃಷ್ಣನನ್ನು ಆರಾಧಿಸಿ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥಾ ಲೋಕಾರ್ಪಣೆ ಎರಡು ಸಂಪುಟಗಳನ್ನು ಎತ್ನಳ್ಳಿ ಪ್ರಕಾಶನದಿಂದ ಬಿಡುಗಡೆ ಮಾಡಲಾಗುತ್ತಿದೆ. ಕಳೆಗನ್ನಡದ ಈ ಕಾವ್ಯ ಕರ್ನಾಟಕ ಭಾಮಿನಿ ಷಟ್ಪದಿಯಲ್ಲಿದ್ದು 16 ಸಾವಿರ ಪದ್ಯಗಳನ್ನೊಳಗೊಂಡಿದೆ. 50 ಹಿಂದೆ ಬರೆದ ಈ ಗ್ರಂಥ ನಾನಾ ಕಾರಣಗಳಿಂದ ವಿಳಂಬವಾಗಿದೆ. ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದರು.
ಕೃಷ್ಣಕವಿ ರಂಗೋಪAತ ನಾಗರಾಜರಾಯ, ಪ್ರಮುಖರಾದ ಪಿ.ವೆಂಕಟೇಶ, ಗುಜ್ಜಲ್ ಗಣೇಶ್, ಹನಮೇಶ ಪಾಟೀಲ್ ಇತರರಿದ್ದರು.