ಹೂವಿನಹಡಗಲಿಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸುತ್ತಿರುವುದು. 
ವಿಜಯನಗರ

ಯೂರಿಯಾ ರಸಗೊಬ್ಬರ ಖರೀದಿಗೆ ಸರ್ವರ್ ಸಮಸ್ಯೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಎಫ್‌ಐಡಿ ಮಾಡಿದ ರೈತರಿಗೆ ಮಾತ್ರ ಯೂರಿಯಾ
ಹೂವಿನಹಡಗಲಿ: ತಾಲೂಕಿನಲ್ಲಿ ಮುಂಗಾರುಮಳೆ ಉತ್ತಮವಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೆಲ ಭಾಗಗಳಲ್ಲಿ ಬಿತ್ತನೆ ಆರಂಭಿಸಿದ್ದಾರೆ. ಬೆಳೆಗಳಿಗೆ ಯೂರಿಯಾ ರಸ ಗೊಬ್ಬರ ಬೇಡಿಕೆ ಇದ್ದು, ಎಫ್‌ಐಡಿ ಮಾಡಿದ ರೈತರಿಗೆ ಮಾತ್ರ ಯೂರಿಯಾ ರಸ ಗೊಬ್ಬರ ಸಿಗುತ್ತಿದ್ದು, ಎಫ್‌ಐಡಿ ಮಾಡಿದ ರೈತರಿಗೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ರಸಗೊಬ್ಬರ ಸಂಗ್ರಹವಿದ್ದರೂ ಖರೀದಿಸಲು ಸರ್ವರ್ ಸಮಸ್ಯೆ ಎದುರಾಗಿದ್ದು, ಅಂಗಡಿ ಮಾಲಿಕರು ಗೊಬ್ಬರ ನೀಡುತ್ತಿಲ್ಲ. ತಾಲೂಕಿನ ಬಹುತೇಕ ಭಾಗಗಳಲ್ಲಿ ರೈತರು ಜೋಳ, ಮೆಕ್ಕೆಜೋಳ, ತೊಗರಿ, ಸೇರಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಆದರೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟ ಆರಂಭವಾಗಿಲ್ಲ. ಇದರಿಂದ ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಬೀಜ ಖರೀದಿಸುತ್ತಿದ್ದಾರೆ.
ಕೆಲವರು ನಕಲಿ ಬಿತ್ತನೆ ಬೀಜಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ ಸಿಗುತ್ತದೆ ಎಂದು ಅಜ್ಞಾತ ಸ್ಥಳಗಳಲ್ಲಿ ಸಂಗ್ರಹಿಸಿರುವ ನಕಲಿ ಬೀಜಗಳನ್ನು ಖರೀದಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತ ಸರ್ವರ್ ಸಮಸ್ಯೆ ಮತ್ತು ಬಿತ್ತನೆ ಬೀಜ ಸಮರ್ಪಕವಾಗಿ ದೊರೆಯದೇ ರೈತರು ಕಂಗಾಲಾಗಿದ್ದಾರೆ.