ಮಾನ್ಯ ವಿವೇಕಾನಂದ ದೊಡ್ಮನಿ ಮರ್ಯಾದೆ ಹತ್ಯೆ ಖಂಡಿಸಿ ಹರಪನಹಳ್ಳಿಯಲ್ಲಿ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಹರಪನಹಳ್ಳಿ: ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ವಿವೇಕಾನಂದ ದೊಡ್ಮನಿ ಅವರ ಮರ್ಯಾದೆ ಹತ್ಯೆ ಖಂಡಿಸಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಮನವಿ ಸಲ್ಲಿಸಲಾಯಿತು.
ಮಾನ್ಯ ಪಾಟೀಲ್ ಮಾದಿಗ ಸಮುದಾಯದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಏಳು ತಿಂಗಳು ಗರ್ಭಿಣಿಯಾಗಿದ್ದ ಮಾನ್ಯರನ್ನು ಆಕೆಯ ಮನೆಯವರು ವರ್ಯಾದೆ ಹತ್ಯೆ ಮಾಡಿದ್ದಾರೆ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮಾನ್ಯಾಗೆ ತಾಯಿ ಕಾರ್ಡ್ ನೀಡುವಾಗ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತುಂಬಾ ತೊಂದರೆ ನೀಡಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಜಾತಿ ಮತ್ತು ಆದಾಯ ಪ್ರಮಾಣ ನೀಡಲು ನಿರಾಕರಿಸಿದ್ದರು ಎಂದು ದೂರಲಾಯಿತು. ಮಾನ್ಯ ಪತಿ ವಿವೇಕಾನಂದಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಲಾಯಿತು.