ಕಾನಹೊಸಹಳ್ಳಿಯಲ್ಲಿ ನಾಡಕಚೇರಿ ವಿಷಯ ನಿರ್ವಾಹಕಿ ಅನಿತಾ ಪೂಜಾರಿಗೆ ಔಷಧ ವ್ಯಾಪಾರಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.
ಕಾನಹೊಸಹಳ್ಳಿ: ಆನ್‌ಲೈನ್‌ನಲ್ಲಿ ಅನಿಯಂತ್ರಿತ ಔಷಧ ಮಾರಾಟ ತಡೆದು ಚಿಲ್ಲರೆ ಔಷಧ ಅಂಗಡಿಗಳನ್ನು ಉಳಿಸುವಂತೆ ಆಗ್ರಹಿಸಿ ಔಷಧ ವ್ಯಾಪಾರಿಗಳ ಸಂಘದಿಂದ ನಾಡಕಚೇರಿ ವಿಷಯ ನಿರ್ವಾಹಕಿ ಅನಿತಾ ಪೂಜಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಂಘದ ಪ್ರಮುಖ ಬಿ.ಮಂಜುನಾಥ್ ಮಾತನಾಡಿ, ಕಾರ್ಪೋರೇಟ್ ಕಂಪನಿಗಳು ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಗಳನ್ನು ಮಾರಾಟ ಮಾಡುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ನಕಲಿ ಔಷಧ, ಸ್ವಯಂಚಿಕಿತ್ಸೆಯಿಂದ ಜನರ ಪ್ರಾಣಕ್ಕೆ ಅಪಾಯವಾಗುತ್ತಿದೆ. ಇದರಿಂದಾಗಿ ಸರ್ಕಾರ ಕೂಡಲೇ ಆನ್‌ಲೈನ್ ಔಷಧ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಡಾ.ಬಿ.ಸೋಮಶೇಖರ್, ನಿತೀಶ್, ಇಮ್ರಾನ್, ಕೊಟ್ರೇಶ್, ನಾಗಭೂಷಣ್, ಆನಂದಸ್ವಾಮಿ, ಜಿ.ಎಸ್.ಮಂಜುನಾಥ್, ದೇವರಾಜ್, ಪ್ರವೀಣ್, ಶ್ರೀರಾಮ್, ರಾಮಣ್ಣ, ಜ್ಯೋತಿ, ರಮೇಶ್, ತಿಪ್ಪೇಶ್, ರಾಕೇಶ್, ಈಶಣ್ಣ ಇತರರಿದ್ದರು.