ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು.
ವೈದ್ಯ ಸಿದ್ದೇಶ್ವರ ಶಿವಸಾಲಿ ಯೋಗ ತರಬೇತಿ ನೀಡಿ ಮಾತನಾಡಿ, ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ದೈನಂದಿನ ಕಾರ್ಯವಾಗಿ ಯೋಗ ಅಳವಡಿಸಿಕೊಳ್ಳಬೇಕು. ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಯೋಗ ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ಸಂಸ್ಥೆ ಕಾರ್ಯದರ್ಶಿ ಜಿ.ಬಸವನಗೌಡ ಮಾತನಾಡಿ, ಯೋಗ ನಮ್ಮೆಲ್ಲರ ಆರೋಗ್ಯದ ಜೀವಾಳವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಸಮಚಿತ್ತದಿಂದ ಅಭ್ಯಾಸ ಮಾಡಿದರೆ ಒಳ್ಳೆಯದು ಎಂದರು. ವಿದ್ಯಾಕೇಂದ್ರದ ಸಹ ಕಾರ್ಯದರ್ಶಿ ದುರ್ಗಣ್ಣ, ಪ್ರಧಾನಾಚಾರ್ಯ ಎಚ್.ಎ.ರಂಗನಾಥ, ಮಂಜುನಾಥ ನಂದಿ, ನಾರಾಯಣ ಕೆರೂರ, ಶಿಕ್ಷಕರಾದ ಸೋಮನಗೌಡ, ಪ್ರಭುದೇವ್, ಮಧುಕರ್, ಕೆ.ಎಂ.ಶಿವಕುಮಾರಸ್ವಾಮಿ, ವಿನಯ್, ಕೆ.ನಾಗರಾಜ, ಆನಂದ್ ಕಡ್ಲಿ, ವೀರೇಶ್, ಕುಮಾರ್ ಆಚಾರ್, ವಿನಯ ಮತ್ತಿತರರು ಇದ್ದರು.