ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಿಸಲು ನಿರ್ಮಿಸಲಾಗಿದ್ದ ರಸ್ತೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನಾಶಪಡಿಸಲಾಯಿತು. 
ವಿಜಯನಗರ

ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಜಪ್ತಿ

ಹೂವಿನಹಡಗಲಿ: ಕುರುವತ್ತಿ ಗ್ರಾಮದ ಬಳಿ ತುಂಗಭದ್ರಾ ನದಿ ತೀರದಲ್ಲಿ ಮರಳು ಅಕ್ರಮ ದಂಧೆ ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದರು.
10 ಲಾರಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಆಧಾರಿಸಿ ಈ ದಾಳಿ ನಡೆಸಲಾಯಿತು. ಸ್ಥಳದಲ್ಲಿ ವಾಹನಗಳು ಇರಲಿಲ್ಲ. ಆದರೆ, 10 ಲಾರಿಯಷ್ಟು ಮರಳನ್ನು ವಶಪಡಿಸಿಕೊಂಡು, ಮೈಲಾರ ಪ್ರವಾಸಿ ಮಂದಿರಕ್ಕೆ ಸಾಗಣೆ ಮಾಡಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಯಿತು.
ನದಿ ತೀರದಿಂದ ಮರಳು ಸಾಗಿಸಲು ಅಕ್ರಮ ದಂಧೆಕೋರರು ರಸ್ತೆ ನಿರ್ಮಿಸಿದ್ದರು. ಜೆಸಿಬಿ ಮೂಲಕ ರಸ್ತೆ ನಾಶಪಡಿಸಿ ವಾಹನಗಳು ಸಂಚರಿಸದಂತೆ ಮಾಡಲಾಯಿತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಾದ ಕೀರ್ತಿ ಕುಮಾರ, ಮಲ್ಲಯ್ಯ ಇದ್ದರು.