ಸಂಡೂರು ತಾಲೂಕು ಚೋರುನೂರು ಗ್ರಾಮದಲ್ಲಿ ಆಯೋಜಿಸಿದ್ದ ಸಮುದಾಯ ಆಧಾರಿತ ಸಂಸ್ಥೆಗಳ ಒಗ್ಗೂಡಿಸುವಿಕೆ ಮೇಳಕ್ಕೆ ವಿದ್ಯಾರ್ಥಿಗಳು ಚಾಲನೆ ನೀಡಿದರು. ತಾಪಂ ಇಒ ಮಡಗಿನ ಬಸಪ್ಪ , ಮಾರ್ಗದರ್ಶಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಗಿರೀಶ್ ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ಪಶು ಸಂಗೋಪನಾ ಇಲಾಖೆ ಎಡಿ ಡಾ.ವಲಿಬಾಷಾ ಇತರರಿದ್ದರು.
ಉತ್ತಮ ಸಮಾಜಕ್ಕಾಗಿ ಜಾಗೃತಿ ಕಾರ್ಯಕ್ರಮ ಆಯೋಜನೆ
ಸಂಡೂರು ತಾಪಂ ಇಒ ಮಡಗಿನ ಬಸಪ್ಪ ಹೇಳಿಕೆ
ಸಂಡೂರು: ಅರ್ಹ ಫಲಾನುಭವಿಗಳು ವಿಮೆ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ಮಡಗಿನ ಬಸಪ್ಪ ಹೇಳಿದರು.
ಚೋರುನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪಂಚಾಯತ್‌ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆ, ಕೌಶಲಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ತಾಪಂ, ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಮುದಾಯ ಆಧಾರಿತ ಸಂಸ್ಥೆಗಳ ಒಗ್ಗೂಡಿಸುವಿಕೆ ಮೇಳದಲ್ಲಿ ಮಾತನಾಡಿದರು.
ಈ ಭಾಗದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು, ಮೂಢನಂಬಿಕೆಗಳು ಕಂಡುಬರುತ್ತಿವೆ. ಇಂಥ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲ ಇಲಾಖೆಗಳು ಸಹಕರಿಸಬೇಕೆಂದರು.
ಮಾರ್ಗದರ್ಶಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಗಿರೀಶ್ ಕುಲಕರ್ಣಿ, ಸಾಮಾಜಿಕ ಭದ್ರತೆ ವಿಮೆ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಸೆಸ್‌ಬಿವೈ, ಎಪಿವೈ ಹಾಗೂ ಬ್ಯಾಂಕ್‌ನಲ್ಲಿರುವ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು. ಪ್ರತಿಯೊಬ್ಬರೂ ವಿಮೆ ಪಾಲಿಸಿ ಹೊಂದಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ಪಶು ಸಂಗೋಪನಾ ಇಲಾಖೆ ಎಡಿ ಡಾ.ವಲಿಬಾಷಾ, ತಾಪಂ ಎಡಿಗಳಾದ ರೇಣುಕಾಚಾರ್ಯ ಸ್ವಾಮಿ, ಮಹೇಶ್ ಕುಮಾರ್, ತಾಲೂಕು ಯೋಜನಾಧಿಕಾರಿ ವಸಂತಕುಮಾರ್, ಮೀನುಗಾರಿಕೆ ಎಡಿ ಮಂಜುನಾಥ್, ಸಿಡಿಪಿಒ ಪಿ.ನಾಗರಾಜ, ಪಿಎಸ್‌ಐ ಮುದ್ದುರಂಗಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ಚನ್ನಬಸಪ್ಪ, ಪಿಡಿಒ ಕರಿಬಸಪ್ಪ, ರಾಜೇಂದ್ರ, ಈಶ್ವರ ರಾವ್, ಉದಯ್‌ಕುಮಾರ್, ರಮೇಶ್, ರುದ್ರಯ್ಯ, ರೇಣುಕಮ್ಮ, ಮಧುಕುಮಾರ್, ಹೊನ್ನೂರಪ್ಪ, ಸೋಮಶೇಖರ್ ಕಲ್ಡಳ್ಳಿ, ಯಂಕಪ್ಪ ಇತರರಿದ್ದರು.