ಹೊಸಪೇಟೆ ಪಿಡಿಐಟಿ ಕಾಲೇಜಿನಲ್ಲಿ ಡಾ.ಮೃತ್ಯುಂಜಯ ರುಮಾಲೆ ಅವರ ಶರಣ ಸಕ್ಕರೆ ಕರಡೆಪ್ಪನವರು ಹಾಗೂ ಕುಡುತಿನಿ ಸಾಹುಕಾರ ಎಣ್ಣೆ ವೀರಮ್ಮ ಕೃತಿಗಳನ್ನು ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಅಮರೇಶ್ ಯತಗಲ್ ಲೋಕಾರ್ಪಣೆ ಮಾಡಿದರು. ನಂದಿಪುರ ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮಿ, ಪಿಡಿಐಟಿ ಕಾಲೇಜಿನ ನಾಗರಾಜ್ ಗುಡೇಕೋಟೆ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಎಂಎA ಶಿವಪ್ರಕಾಶ್, ಸಿದ್ದರಾಮ ಕಲ್ಮಠ, ಪಲ್ಲೇದ್ ಇತರರಿದ್ದರು. 
ವಿಜಯನಗರ

ರುಮಾಲೆ ಕೃತಿಗಳು ಯುವಪಿಳಿಗೆಗೆ ಅರಿವು

ಪ್ರಮುಖ ಮುಖ್ಯಾಂಶಗಳು

  • ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಅಮರೇಶ್ ಯತಗಲ್ ಅಭಿಪ್ರಾಯ
ಹೊಸಪೇಟೆ: ಡಾ.ಮೃತ್ಯುಂಜಯ ರುಮಾಲೆ ಅವರ ಈ ಕೃತಿಗಳು ಶರಣ ಸಕ್ಕರೆ ಕನ್ನಡಪ್ಪನವರು ಮತ್ತು ಕುಡುತಿನಿ ಸಹಕಾರ ಎಣ್ಣೆ ವೀರಮ್ಮ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಲೋಕದ ಪ್ರಜ್ಞೆಯಾಗಿ ಅಧ್ಯಯನಶೀಲರಿಗೆ ಆಕರ ಕೃತಿಗಳಾಗಿವೆ ಎಂದು ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಅಮರೇಶ್ ಯತಗಲ್ ಹೇಳಿದರು.
ವಿಜಯನಗರ ಪ್ರತಿಷ್ಠಾನ, ಕುಡತಿನಿಯ ಸತ್ಸಂಗ ಆಶ್ರಮ ಶ್ರೀರಾಮಗಿರಿಮಠದಿಂದ ನಗರದ ಪಿಡಿಐಟಿ ಕಾಲೇಜಿನಲ್ಲಿ ಇತ್ತಿಚೆಗೆ ನಡೆದ ಡಾ.ಮೃತ್ಯುಂಜಯ ರುಮಾಲೆ ಅವರ ಶರಣ ಸಕ್ಕರೆ ಕರಡೆಪ್ಪನವರು ಹಾಗೂ ಕುಡುತಿನಿ ಸಾಹುಕಾರ ಎಣ್ಣೆ ವೀರಮ್ಮ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಶತಮಾನಗಳ ಹಿಂದೆ ಮಹಿಳಾ ಆತ್ಮತೆಯಾಗಿ ಸಾಮಾಜಿಕ ಸಂಕಷ್ಟಗಳನ್ನು ಎದುರಿಸಿ ಎಣ್ಣೆ ವೀರಮ್ಮನವರು ಪ್ರಸ್ತುತ ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿದ್ದಾರೆ. ಮೃತ್ಯುಂಜಯ ರುಮಾಲೆಯವರು ಬದುಕು ಮತ್ತು ಬರಹವನ್ನು ಏಕರೂಪವಾಗಿ ಕಂಡು ಬದುಕಿ ಕನ್ನಡ ಸಾರಸ್ವತ ಲೋಕಕ್ಕೆ ಹತ್ತಾರು ಸಂಶೋಧನಾ ಕೃತಿಗಳನ್ನ ವ್ಯಕ್ತಿ ಚರಿತ್ರೆಗಳನ್ನ ಜೀವನ ಚರಿತ್ರೆಗಳನ್ನ ಕೊಡುಗೆಯಾಗಿ ನೀಡಿದ ವಿದ್ವಾಂಸರು. ಬಳ್ಳಾರಿ ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಅರಿಯಲು ರುಮಾಲೆಯವರ ಕೃತಿಗಳು ಅತ್ಯಂತ ಪ್ರಮುಖವಾಗಿವೆ ಎಂದರು.
ನAದಿಪುರ ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದರು. ಪಿಡಿಐಟಿ ಕಾಲೇಜಿನ ನಾಗರಾಜ್ ಗುಡೇಕೋಟೆ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಎಂಎA ಶಿವಪ್ರಕಾಶ್, ಸಿದ್ದರಾಮ ಕಲ್ಮಠ, ಪಲ್ಲೇದ್ ಪಂಪಾಪತಿ, ಮಂಜುನಾಥ, ಗೊಗ್ಗ ಚೆನ್ನಬಸಯ್ಯ ಕೋರಿ ಶೆಟ್ಟಿ ಲಿಂಗಪ್ಪ, ಮಧುರಚನ್ನ ಶಾಸ್ತ್ರಿ, ಡಾ.ಶಿವನಗೌಡ ಸಾತ್ನೂರ್, ಪಿ.ದಿವಾಕರ್ ನಾರಾಯಣ, ಪ್ರಕಾಶ್, ನಾಗರಾಜ, ಜಂಬಯ್ಯ, ಮಲ್ಲಿಕಾರ್ಜುನ ಇತರರಿದ್ದರು.