ಹೊಸಪೇಟೆ: ನಗರದ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ವತಿಯಿಂದ 2026–27ನೇ ಸಾಲಿನ 68ನೇ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಪದಗ್ರಹಣ ಸಮಾರಂಭವು ಜು.12ರ ಭಾನುವಾರ ಬೆಳಿಗ್ಗೆ 10.30ಕ್ಕೆ ಇಲ್ಲಿನ ನಗರದ ಹಾಲ್‌ನಲ್ಲಿ ನಡೆಯಲಿದೆ ಎಂದು ರೋಟರಿ ಅಧ್ಯಕ್ಷ ಎಂ.ಆರ್.ವೀರಭದ್ರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ನಾನು ಹಾಗೂ ಕಾರ್ಯದರ್ಶಿಯಾಗಿ ಕಿರಣಕುಮಾರ ಸೋನಿ ಪದಗ್ರಹಣ ಮಾಡಲಿದ್ದಾರೆ. ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆಯಾಗಿ ಎ.ರಾಜೇಶ್ವರಿ ಹಾಗೂ ಕಾರ್ಯದರ್ಶಿಯಾಗಿ ಶೈಲಜಾ ಒಡೆಯರ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಆಗಸ್ಟ್ನಲ್ಲಿ ವಿದ್ಯಾರ್ಥಿಗಳಿಗಾಗಿ 'ರೈಲ' ಕಾರ್ಯಕ್ರಮ ಹಾಗೂ 'ಸ್ಮೈಲ್' ಮೂಲವ್ಯಾಧಿ ಮುಕ್ತ ಶಿಬಿರ ಆಯೋಜಿಸಲಾಗಿದೆ. ಟ್ರಸ್ಟ್ ಖಜಾಂಚಿ ವಿಜಯ ಸಿಂದಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನದ ರೋಬೋಟಿಕ್ ಫಿಸಿಯೋಥೆರಪಿ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ನವಜಾತ ಶಿಶುಗಳ ಶ್ರವಣದೋಷ ತಪಾಸಣೆ ಹಾಗೂ ನೂತನ ಡಯಾಲಿಸಿಸ್ ಯಂತ್ರಗಳ ಅಳವಡಿಕೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯದರ್ಶಿ ಕಿರಣ್ ಕುಮಾರ್ ಸೋನಿ, ರೋಟೇರಿಯನ್ ಮಂಜುನಾಥ್ ಅಂಗಡಿ, ದೀಪಕ್ ಕೊಳಗದ್ ಇದ್ದರು.