ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಬುಧವಾರ ಯುಜಿಸಿ ಪಿಎಚ್.ಡಿ. ಕೋರ್ಸ್ವರ್ಕ್ ಮೂರನೇ ಹಂತದ ಕಾರ್ಯಕ್ರಮ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿದರು. ಬೆಂಗಳೂರಿನ ಪ್ರಾಧ್ಯಾಪಕ ಡಾ.ಎ.ನಾರಾಯಣ, ತುಮಕೂರು ಪ್ರಾದ್ಯಾಪಕ ಡಾ.ಡಿ.ವಿ.ಗುಂಡಪ್ಪ, ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್ ಇದ್ದರು. 
ವಿಜಯನಗರ

ಸಂಶೋಧಕರಿಗೆ ಸಾಮಾಜಿಕ ಹೊಣೆಗಾರಿಕೆ ಅಗತ್ಯ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಕರೆ
ಹೊಸಪೇಟೆ: ಸಂಶೋಧನೆ ಎನ್ನುವುದು ಅತ್ಯಂತ ಗಂಭೀರವಾದ ಪ್ರಕ್ರಿಯೆಯಾಗಿದೆ. ಅದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಬುಧವಾರ ಯುಜಿಸಿ ಪಿಎಚ್.ಡಿ. ಕೋರ್ಸ್ವರ್ಕ್ ಮೂರನೇ ಹಂತದ ಕಾರ್ಯಕ್ರಮದಲ್ಲಿ ಸಮಕಾಲೀನ ಸಮಾಜ ಸಂಶೋಧನೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಶೋಧಕನಿಗೆ ಅಪಾರ ಜವಾಬ್ದಾರಿಗಳಿದ್ದು, ಅವನು ತನ್ನ ವೈಯಕ್ತಿಕ ಅಭಿವೃದ್ಧಿಗಾಗಿ ಸಂಶೋಧನೆ ಮಾಡಿದರೂ, ಅದರ ಪರಿಣಾಮಗಳು ಸಮಾಜದ ವಿವಿಧ ವಲಯಗಳಿಗೆ ತಲುಪುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಬಹುಮುಖಿ ಹಾಗೂ ಅಂತರ್ಶಿಸ್ತಿಯ ಜ್ಞಾನವಾಗಿ ಬೆಳೆಯುತ್ತಿದೆ. ಸಂಶೋಧಕರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವುದರ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಕೂಡ ಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಬೆAಗಳೂರಿನ ಪ್ರಾಧ್ಯಾಪಕ ಡಾ.ಎ.ನಾರಾಯಣ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಾದ ನೀವು ಕೇಳುವುದು, ನೋಡುವುದು ಮತ್ತು ಓದುವ ವಿಧಾನವು ಇತರರಿಂದ ಭಿನ್ನವಾಗಿರಬೇಕು. ನೀನು ಏನು ಓದಿದ್ದೀಯ? ಎಂಬ ಪ್ರಶ್ನೆಯ ಅರ್ಥ, ವಾಸ್ತವದಲ್ಲಿ ನೀನು ಏನು ಕಲಿತಿದ್ದೀಯ ಎಂಬುದಾಗಿದೆ. ಸಂಶೋಧಕರಿಗೆ ಆಳವಾದ ಅಧ್ಯಯನ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಅತ್ಯಂತ ಅಗತ್ಯವಿದೆ ಎಂದರು.