ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕಾನಹೊಸಹಳ್ಳಿ ಜೆಸ್ಕಾಂ ಶಾಖಾಧಿಕಾರಿ ನಾಗರಾಜಗೆ ರೈತ ಸಂಘದ (ಹುಚ್ಚವನಹಳ್ಳಿ ಮಂಜುನಾಥ ಬಣ) ಸದಸ್ಯರು ಮನವಿ ಸಲ್ಲಿಸಿದರು. 
ವಿಜಯನಗರ

ವಿದ್ಯುತ್ ಸಂಪರ್ಕ ಸಕ್ರಮಗೊಳಿಸಿ

ಅಶೋಕ್ ಕುಮಾರ್ ಎನ್
ಕಾನಹೊಸಹಳ್ಳಿ: ಹೋಬಳಿಯ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಜೆಸ್ಕಾಂ ಶಾಖಾಧಿಕಾರಿ ನಾಗರಾಜಗೆ ರೈತ ಸಂಘದ (ಹುಚ್ಚವನಹಳ್ಳಿ ಮಂಜುನಾಥ ಬಣ) ಸದಸ್ಯರು ಬುಧವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಹುಲಿಕೆರೆ ಮಾರಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು ಅಂತರ್ಜಲದ ಪ್ರಮಾಣ ಹೆಚ್ಚಾಗಿದೆ. ರೈತರು ಈ ಹಿಂದೆ ಕೊರೆಯಿಸಿದ್ದ ಕೊಳವೆಬಾವಿಗೆ ಪಂಪ್‌ಸೆಟ್ ಅಳವಡಿಸಿಕೊಂಡಿದ್ದು, ವಿದ್ಯುತ್ ಸಂಪರ್ಕ ಸಕ್ರಮಗೊಳಿಸಬೇಕು. ಕೆಲವೆಡೆ. ಜೆಸ್ಕಾಂ ಅಧಿಕಾರಿಗಳು ವೈರ್ ಅನ್ನು ಕಿತ್ತು ಹಾಕಿದ್ದಾರೆ. ಇಲಾಖೆಯಿಂದಲೇ ಮತ್ತೆ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್ ಸ್ವಾಮಿ ಮಾತನಾಡಿ, ವನ್ಯಜೀವಿಗಳ ಉಪಟಳ ಹೆಚ್ಚಾಗಿದ್ದು, ಹಗಲು ವೇಳೆ ವಿದ್ಯುತ್ ಪೂರೈಕೆ ಮಾಡುವ ಅದೇಶವನ್ನು ತ್ವರಿತವಾಗಿ ಜಾರಿಗೆ ತರಬೇಕೆಂದರು. ನಾಗರಾಜ್, ಸಿದ್ದೇಶ್, ಬಿ.ಕುಮಾರ್, ಮಂಜುನಾಥ, ಮರುಳಸಿದ್ದಪ್ಪ, ಓಬಳೇಶ್, ಪ್ರಭು, ಬಾಲರಾಜ್, ಮಹೇಶ್, ನಾಗರಾಜ್, ಹಾಲಸ್ವಾಮಿ, ಮೂರ್ತೆಪ್ಪ ಇದ್ದರು.