ಹೊಸಪೇಟೆಯ ತಹಸೀಲ್ ಕಚೇರಿ ಮುಂದೆ ನೋಂದಣಿ ಪತ್ರ ಬರಹಗಾರರ ಸಂಘದಿAದ ಪ್ರತ್ಯೇಕ ಲಾಗಿನ್‌ಗೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಎಸ್.ಎಂ.ರವಿಕಾAತ, ಉಪಾಧ್ಯಕ್ಷ ವಿ.ಅಲ್ತಾಫ್, ಪ್ರಧಾನ ಕಾರ್ಯದರ್ಶಿ ಎಚ್.ಪ್ರವೀಣ್ ಕುಮಾರ್, ಪ್ರಮುಖರಾದ ಎನ್.ಎಂ.ಪAಪಾಪತಿ, ವಿ.ಗುರುರಾಜ್ ಇತರರಿದ್ದರು. 
ವಿಜಯನಗರ

ಕಾವೇರಿ 2.0 ಪ್ರತ್ಯೇಕ ಲಾಗಿನ್ ನೀಡಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ನೋಂದಣಿ ಪತ್ರ ಬರಹಗಾರರ ಸಂಘದಿAದ ಪ್ರತಿಭಟನೆ
ಹೊಸಪೇಟೆ: ಪ್ರತ್ಯೇಕ ಲಾಗಿನ್ ನೀಡುವಂತೆ ಒತ್ತಾಯಿಸಿ ನೋಂದಣಿ ಪತ್ರ ಬರಹಗಾರರ ಸಂಘದಿAದ ತಹಸೀಲ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ಇತ್ತೀಚೆಗೆ ಆಸ್ತಿ ಪತ್ರಗಳ ನೋಂದಣಿ ಕುರಿತಂತೆ ಜಾರಿಗೆ ತಂದಿರುವ ಪತ್ರ ನೋಂದಣಿಗಳ ತಂತ್ರಾAಶ ಕಾವೇರಿ 2.0ನÀಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿರುವುದರಿಂದ ಪತ್ರ ಬರಹಗಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರತೊಂದರೆಯಾಗಿದೆ. ಹೊರ ರಾಜ್ಯಗಳಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಒದಗಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಒದಗಿಸಬೇಕು. ಗಣಕೀಕೃತ ಇ-ಸ್ವತ್ತು, ಇ-ಆಸ್ತಿ ದಾಖಲೆಗಳಿಂದ ನೋಂದಣಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು. ಪತ್ರ ಬರಹಗಾರರ ಕಾರ್ಯದಲ್ಲಿ ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ಪರಿವೀಕ್ಷಕರಿಂದ ರಾಜ್ಯದ ಎಲ್ಲಾ ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು. ಎಲ್ಲಾ ಪತ್ರ ಬರಹಗಾರರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಎಸ್.ಎಂ.ರವಿಕಾAತ, ಉಪಾಧ್ಯಕ್ಷ ವಿ.ಅಲ್ತಾಫ್, ಪ್ರಧಾನ ಕಾರ್ಯದರ್ಶಿ ಎಚ್.ಪ್ರವೀಣ್ ಕುಮಾರ್, ಪ್ರಮುಖರಾದ ಎನ್.ಎಂ.ಪAಪಾಪತಿ, ವಿ.ಗುರುರಾಜ್, ಎನ್.ಎಂ.ವೀರಮAಗಳ, ಎಂ.ಕೊಟ್ರಯ್ಯ, ಕೆ.ರಮೇಶ್‌ರಾವ್, ಎನ್.ಎಂ.ರವಿ ಶಂಕರ್, ಕೆ.ಹೆಚ್.ವೇದಮೂರ್ತಿ, ಬಿ.ಮಂಜುಳಾ, ಬಿ.ರಮೇಶ್, ಕೆ.ಶಂಕರಮ್ಮ, ಎಂ.ತಿಪ್ಪೇಸ್ವಾಮಿ, ಖಾದರ ಬಾ಼, ಹಸೀನಾ ಬೇಗಂ, ಕಿರಣ್‌ಕುಮಾರ್, ಎಸ್.ಹೊನ್ನೂರ್ ಪಾಷ, ಬಿ.ರಘು, ಕೆ.ಸಂತೋಷ್‌ಕುಮಾರ್ ಇತರರಿದ್ದರು.