ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾನವ ಅಭಿವೃದ್ಧಿ ವರದಿ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ ವರದಿಗಳ ತಯಾರಿಕೆ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಉದ್ಘಾಟಿಸಿದರು. ಜಿಪಂ ಸಿಇಓ ನೋಗ್ಜಾಯ್ ಮಹಮದ್ ಅಲಿ ಅಕ್ರಂ ಶಾ, ಎಎಸ್ಪಿ ಮಂಜುನಾಥ, ಕನ್ನಡ ವಿವಿಯ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಎಚ್.ಡಿ.ಪ್ರಶಾಂತ, ಡಾ.ಜಿ.ಎಸ್.ಗಣೇಶ್ ಪ್ರಸಾದ್ ಇತರರಿದ್ದರು.
- ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
ಹೊಸಪೇಟೆ: ಮಾನವ ಸಂಪನ್ಮೂಲ ಅಭಿವೃದ್ಧಿಗೆ ನಗರ ಹಾಗೂ ಗ್ರಾಮೀಣ ಹಂತದಿAದ ಅಭಿವೃದ್ಧಿಯಾದಾಗ ಮಾತ್ರ ಜಿಲ್ಲಾ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಗೆ ಸಂಬAಧಿಸಿದ ಸಮಗ್ರ ವರದಿಯನ್ನು ಫೆ.10ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ 2025ರ ಮಾನವ ಅಭಿವೃದ್ಧಿ ವರದಿ ಹಾಗೂ 2031 ರವರೆಗೆ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ ವರದಿಗಳ ತಯಾರಿಕೆ ಕುರಿತು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಯೋಜನೆಗೆ ಅಧಿಕಾರಿಗಳು ಒತ್ತಡದಲ್ಲಿ ತಪ್ಪು ಮಾಹಿತಿ ನೀಡದೇ ನಿಖರ ಮತ್ತು ಸ್ಪಷ್ಟ ದತ್ತಾಂಶ ಒದಗಿಸಬೇಕು. ಮುಂಬರುವ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅವಶ್ಯವಿರುವ ಶೈಕ್ಷಣಿಕ, ಮಾನವ ಅಭಿವೃದ್ಧಿ, ತಲಾದಾಯ ಈ ಎಲ್ಲಾ ಅಂಶಗಳನ್ನೊಳಗೊAಡ ನಿಖರ ಮಾಹಿತಿ ನೀಡಬೇಕು. ಅಧಿಕಾರಿಗಳು ನೀಡುವ ದತ್ತಾಂಶದ ಆಧಾರದಿಂದಲೇ ಯೋಜನೆ ಅನುಷ್ಟಾನಗೊಳ್ಳಲಿದೆ. ಆದ್ದರಿಂದ ಭವಿಷ್ಯದ ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯ ಗೊಂದಲ, ಸಮಸ್ಯೆ ಉಂಟಾಗದAತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪೂರಕ ವರದಿ ತಯಾರಿಸಿ ಜೂನ್ ಅಂತ್ಯಕ್ಕೆ ವರದಿ ಒಪ್ಪಿಸಬೇಕು ಎಂದರು.