ಹೂವಿನಹಡಗಲಿಯ ಸಿಂಗಟಾಲೂರು ಏತನೀರಾವರಿ ಯೋಜನೆ ಕಚೇರಿಗೆ ಮುತ್ತಿಗೆ ಹಾಕಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ನಾಗಪ್ಪ, ಮಹದೇವ, ಬಸವರಾಜ, ಸುರೇಶ್, ನಾಗರಾಜ, ಕೊಟ್ರೇಶ್, ಮುತ್ತುರಾಜ ಇತರರಿದ್ದರು. 
ವಿಜಯನಗರ

ಒಣಗುತ್ತಿರುವ ಬೆಳೆ ರಕ್ಷಣೆ ಮಾಡಿ

ಕುರುವತ್ತಿ ಶ್ರೀಕಾಂತಪ್ಪ

ಹೂವಿನಹಡಗಲಿ: ತಾಲೂಕಿನ ಮುದೇನೂರು ಕೆರೆಗೆ ತಕ್ಷಣ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ರೈತರು ಶುಕ್ರವಾರ ಸಿಂಗಟಾಲೂರು ಏತನೀರಾವರಿ ಯೋಜನೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಜಮಾಯಿಸಿ ಸರ್ಕಾರ-ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಮುದೇನೂರು ಕೆರೆಗೆ ನೀರು ಹರಿಸದಿದ್ದರೆ ಭಾರಿ ನಷ್ಟ ಉಂಟಾಗಲಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ತಕ್ಷಣ ಕೆರೆಗೆ ನೀರು ಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಶಿವನಾಗಪ್ಪ, ಮಹದೇವ, ಬಸವರಾಜ, ಸುರೇಶ್, ನಾಗರಾಜ, ಕೊಟ್ರೇಶ್, ಮುತ್ತುರಾಜ ಇತರರಿದ್ದರು.