ಹರಪನಹಳ್ಳಿ: ಆಸ್ತಿ ವಿಚಾರಕ್ಕೆ ತಾಲೂಕಿನ ಹಗರಿ ಶೀರನಹಳ್ಳಿ ಗ್ರಾಮದ ಮರುಳ ಸಿದ್ದ (25) ತಮ್ಮನಿಂದ ಕೊಲೆಯಾದ ಘಟನೆ ಶುಕ್ರವಾರ ತಡರಾತ್ರಿ ಸಮೀಪದ ಪುಣಭಗಟ್ಟ ಅರಣ್ಯ ಪ್ರದೇಶದ ಬೈರಪ್ಪನ ಪಾದಗಟ್ಟೆ ಬಳಿ ನಡೆದಿದೆ.
ಮೃತನ ತಮ್ಮನಾದ ಪತ್ರೇಶನು ಕೊಲೆ ಅರೋಪಿ. ಪತ್ರೇಶನು ತನ್ನ ಸ್ನೇಹಿತನೊಟ್ಟಿಗೆ ಸೇರಿ ಮದ್ಯಪಾನ ಸೇವಿಸಿದ್ದಾರೆ, ಆಸ್ತಿಯ ಸಂಬಂದ ಅಣ್ಣ ತಮ್ಮನಿಗು ಮಾತಿಗೆ ಮಾತು ಬೆಳೆದು, ಕೊಲೆಯಲ್ಲಿ ಅಂತ್ಯವಾಗಿದೆ. ಮೃತದೇಹನ್ನು ಅಲ್ಲಿಯೇ ಬಿಸಾಡಲಾಗಿದೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಎಸ್.ಜಾಹ್ನಾವಿ, ಹರಪನಹಳ್ಳಿ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಂತೇಶ ಸಜ್ಜನ್, ಹಾಗೂ ಅರಸೀಕೆರೆ ಠಾಣೆಯ ಪಿಎಸ್ಐ ವಿಜಯಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.