ಕೂಡ್ಲಿಗಿ ತಾಲೂಕಿನ ಚಿಕ್ಕ ಕುಂಬಳಗುಂಟೆ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯಬೇಕು ಎಂದು ಒತ್ತಾಯಿಸಿ ಅಬಕಾರಿ ಕಾನ್‌ಸ್ಟೇಬಲ್ ತಿಪ್ಪೇಶಗೆ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ಪ್ರಮುಖರು ಮನವಿ ಸಲ್ಲಿಸಿದರು.  
ವಿಜಯನಗರ

ಮದ್ಯ ಅಕ್ರಮ ಮಾರಾಟ ತಡೆಯಿರಿ

ಕೂಡ್ಲಿಗಿ: ಚಿಕ್ಕ ಕುಂಬಳಗುಂಟೆ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ಪ್ರಮುಖರು ಅಬಕಾರಿ ನಿರೀಕ್ಷಕಗೆ ಮನವಿ ಸಲ್ಲಿಸಿದರು.
ಪರವಾನಗಿ ಇಲ್ಲದೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಬಹುತೇಕರು ಕುಡಿತದ ಚಟಕ್ಕೆ ಬಲಿಯಾಗಿದ್ದಾರೆ. ಯುವಕರು ಕೆಲಸಕ್ಕೆ ಹೋಗದೆ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಬೇರೆ ಗ್ರಾಮಗಳಿಂದ ಬರುವ ಮದ್ಯವ್ಯಸನಿಗಳಿಂದ ನಮ್ಮೂರಿನ ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರಾದ ಎಚ್.ಮಂಜುನಾಥ, ಕೆ.ಎಚ್. ತಿಪ್ಪೇಶ, ರವಿರಾಜ್, ಟಿ.ಮಲ್ಲಿಕಾರ್ಜುನ, ನಾಗರಾಜ, ಮಲ್ಲೇಶ್, ರಾಜಪ್ಪ, ಮಂಜಪ್ಪ ಇದ್ದರು.