ಕಂಪ್ಲಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಮಕ್ಕಳು ಛದ್ಮವೇಷ ಧರಿಸಿ ಗಮನ ಸೆಳೆದರು.  
ವಿಜಯನಗರ

ಉತ್ತಮ ಭವಿಷ್ಯಕ್ಕೆ ಸಹಕಾರಿ ಪ್ರತಿಭಾ ಕಾರಂಜಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ಸ್ಪರ್ಧಿಗಳ ಅರ್ಹತೆಗೆ ತಕ್ಕಂತೆ ಪಾರದರ್ಶಕವಾಗಿ ತೀರ್ಪು ನೀಡುವಲ್ಲಿ ತೀರ್ಪುಗಾರರು ಜಾಗ್ರತೆ ತೋರಬೇಕು ಎಂದು ಸಿಆರ್‌ಪಿ ಎ.ಗಂಗಾಧರ ಹೇಳಿದರು.
ಪಟ್ಟಣದಲ್ಲಿ 8ನೇ ವಾರ್ಡ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಮಾತನಾಡಿದರು. ಪ್ರತಿಭಾ ಕಾರಂಜಿ, ಕಲೋತ್ಸವ ಮಕ್ಕಳ ಭವಿಷ್ಯದ ಬದುಕನ್ನು ಉತ್ತಮಗೊಳಿಸಬಲ್ಲದು. ಮಕ್ಕಳಲ್ಲಿನ ಕಲೆ, ಸುಪ್ತ ಕೌಶಲ ಗುರುತಿಸಿ ಪ್ರಾಮಾಣಿಕ ತೀರ್ಪು ನೀಡಲು ತೀರ್ಪುಗಾರರು ಮುಂದಾಗಬೇಕು. 41 ಸ್ಪರ್ಧೆಗಳಲ್ಲಿ 31 ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದರು.
ಕಂಪ್ಲಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕಲ್ಗುಡಿ ವಿಶ್ವನಾಥ ಮಾತನಾಡಿ, ಮಕ್ಕಳಿಗೆ ಪಠ್ಯದೊಂದಿಗೆ ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷಕರು ಆದ್ಯತೆ ನೀಡಬೇಕು. ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.
ಅಧಿಕಾರಿಗಳಾದ ಸುಜಾತಾ, ಎಚ್.ದೊಡ್ಡಬಸಪ್ಪ, ಎಂ.ಎ.ನಾಗನಗೌಡ, ಹನುಮಂತಪ್ಪ, ಸುನೀತಾ ಪೂಜಾರಿ, ಮಂಜುನಾಥ, ಜೋಗಿನಾಯಕ ರುದ್ರಪ್ಪ, ಎಂ.ರೇವಣ್ಣ, ಟಿ.ಎಂ.ಬಸವರಾಜ, ಎನ್.ಬಿ ರೇಣುಕಾರಾಧ್ಯ, ಭುವನೇಶ್ವರ್, ಕರುಣಾಕರಾಚಾರ್, ಎಸ್.ಶಾಮಸುಂದರರಾವು, ಕೆ.ವಿರೂಪಾಕ್ಷಪ್ಪ, ಆರ್.ಬಸವರಾಜ್, ರಾಜು ಬಿಲಂಕರ ಇತರರಿದ್ದರು.