ಹೊಸಪೇಟೆಯಲ್ಲಿ ಡಿವೈಎಸ್ಪಿ ಡಾ.ಮಂಜುನಾಥ ತಳವಾರ್ ನೇತೃತ್ವದಲ್ಲಿ ಬಂಗಾರ ಅಂಗಡಿಗಳಿಗೆ ಭೇಟಿ ನೀಡಿದ ಪರಿಶೀಲನೆ ಮಾಡಲಾಯಿತು. ಸಿಪಿಐಗಳಾದ ಲಖನ್ ಮಸುಗುಪ್ಪಿ, ಮಹಮ್ಮದ್ ಗೌಸ್, ರಾಜೇಶ್ ಭಟಗುರ್ಕಿ ಇದ್ದರು.
- ವಿಜಯನಗರ ಎಲ್ಲ ವಿಭಾಗಗಳಲ್ಲಿ ವಿಶೇಷ ಪಾಠ
ಹೊಸಪೇಟೆ: ರಾಜ್ಯದ ಕೆಲ ಜಿಲ್ಲೆಗಳಲ್ಲಿನ ಚಿನ್ನದಂಗಡಿಗಳ ಕಳ್ಳತನದ ಹಿನ್ನೆಲೆ ವಿಜಯನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ಜಿಲ್ಲೆಯ ಚಿನ್ನದಂಗಡಿ ಮಾಲೀಕರು, ಸಿಬ್ಬಂದಿಗಳಿಗೆ ವಿಶೇಷ ಜಾಗೃತಿ ಪಾಠ ಮಾಡಿದ್ದಾರೆ.
ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳರು, ಚಿನ್ನದಂಗಡಿಗಳ ಮೇಲೆ ಏಕಾಏಕಿ ದಾಳಿ ಮಾಡಿ, ಚಿನ್ನಾಭರಣಗಳನ್ನ ದೋಚಿದಂತಹ ಪ್ರಕರಣಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಚಿನ್ನದಂಗಡಿಗಳಿಗೆ ಭೇಟಿ ನೀಡಿದ ಪೊಲೀಸರು, ಕಳ್ಳರು ಬಂದಾಗ ಏನು ಮಾಡಬೇಕು, ಯಾವ ರೀತಿ ಎಚ್ಚರಿಕೆಯಿಂದ ವ್ಯಾಪಾರ ಮಾಡಬೇಕು ಅಂತ ಜಾಗೃತಿ ಮೂಡಿಸುತ್ತಿದ್ದಾರೆ.
ಚಿನ್ನದಂಗಡಿಗಳ ಲಿಸ್ಟ್ ಸಿದ್ಧಪಡಿಸಿಕೊಂಡು, ಚಿನ್ನದಂಗಡಿಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೊದಲು ಚಿನ್ನದಂಗಡಿಯ ಸಿಸಿ ಕ್ಯಾಮರಾಗಳ ಸುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಂತರ ಕಳ್ಳರು ಬಂದAತಹ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ರವಾನಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಪ್ರಮುಖ ಆಭರಣದ ಅಂಗಡಿಗಳಿಗೆ ಸೆಕ್ಯೂರಿಟಿ ಗಾರ್ಡ್, ಎಚ್ಚರಿಕೆ ಅಲರಮ್ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲಿಸುವಂತೆ ಸೂಚಿಸಲಾಗಿದೆ. ಇನ್ನು ಭದ್ರತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಆಭರಣದ ಅಂಗಡಿಗಳಿಗೆ ಸೂಚನೆ ನೀಡಲಾಗಿದ್ದು, ದಿನ 24ಗಂಟೆ ಸಿಸಿ ಕ್ಯಾಮರಾಗಳ ಆನ್ ಹಾಗೂ ಸೆಕ್ಯುರಿಟಿ ಗಾರ್ಡ್ ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದಾರೆ.