ಹಗರಿಬೊಮ್ಮನಹಳ್ಳಿ ತಾಲೂಕು ಆಡಳಿತ ಸೌಧದಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
ಡಾ.ಬಸವ ರೆಡ್ಡಿ ಮಾತನಾಡಿ, ವೇಮನ ಅವರು ವೈಯಕ್ತಿಕವಾಗಿ ಬದಲಾವಣೆಯಾಗಿ ಸಮಾಜಕ್ಕೆ ಮಾದರಿಯಾದರು ಎಂದರು. ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಬಸವರಾಜ ರೆಡ್ಡಿ ಮಾತನಾಡಿ, ವೇಮನ ಅವರು ಸಮಾನತೆ, ಶಾಂತಿ, ಸಹನೆ, ಸಹಬಾಳ್ವೆ, ಸಹಕಾರ, ಸ್ವಾಭಿಮಾನ ಹೊಂದಿರಬೇಕು ಎಂದು ಸಮಾಜಕ್ಕೆ ತಿಳಿಹೇಳಿದ ಮಹನೀಯರಾಗಿದ್ದಾರೆ. ಅದರಂತೆ ಪ್ರತಿಯೊಬ್ಬರೂ ಬದುಕಬೇಕು ಎಂದರು.
ತಹಸೀಲ್ದಾರ್ ಆರ್.ಕವಿತಾ, ಪ್ರಮುಖರಾದ ಆರ್.ಕೇಶವರೆಡ್ಡಿ, ಬನ್ನಿಗೋಳ ವೆಂಕಣ್ಣ, ಮೈನಳ್ಳಿ ಕೊಟ್ರೇಶಪ್ಪ, ಪಂಚಪ್ಪ, ಅಶೋಕ ಕನ್ನಿಹಳ್ಳಿ, ಚಂದ್ರಶೇಖರ ರೆಡ್ಡಿ, ಗದ್ದಿಕೆರೆ ಯಂಕಾರೆಡ್ಡಿ ಮತ್ತಿತರರು ಇದ್ದರು.