ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮೈಲಾರ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಕೊಡಿಸುವಂತೆ ಒತ್ತಾಯಿಸಿ ರೈತರು ಮನವಿ ಸಲ್ಲಿಸಿದರು. ಪ್ರಮುಖರಾದ ಟಿ.ನಾಗರಾಜ್, ಸಣ್ಣಕ್ಕಿ ರುದ್ರಪ್ಪ, ಹುಸೇನ್, ಸುರೇಶ್ ಇತರರಿದ್ದರು.
- ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ
ಹೊಸಪೇಟೆ: ಮೈಲಾರ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಕೊಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಒತ್ತಾಯಿಸಿದರು.
ಈ ಭಾಗದ ನೂರಾರು ಸಾವಿರಾರು ರೈತರು ದೂರದ ಕಾರ್ಖಾನೆಗಳಿಗೆ ನಷ್ಟದಲ್ಲಿ ಕಬ್ಬು ಸಾಗಾಟ ಮಾಡುವ ಅನಿವಾರ್ಯ ಇದೆ. ಆದರೆ, ನವೆಂಬರ್ ಎಲ್ಲ ಕಾರ್ಖಾನೆಗಳು ಈಗಾಗಲೆ ಸಂಪೂರ್ಣ ಬಿಲ್ ಪಾವತಿ ಮಾಡಿದ್ದಾರೆ. ನಾಲು ತಿಂಗಳು ಕಳೆದರೂ, ಮೈಲಾರ ಶುಗರ್ಸ್ಯಿಂದ ಈ ವರೆಗೆ ಬಿಲ್ ಪಾವತಿ ಮಾಡಿಲ್ಲ. ಸಂಬAಧಪಟ್ಟ ಅಧಿಕಾರಿಗಳಿಗೂ, ಆಡಳಿತ ಮಂಡಳಿಯವರಿಗೂ ವಿಚಾರಿಸಿದರೆ, ರೈತರಿಗೆ ಪೇಮೆಂಟ್ ಮಾಡುತ್ತೇವೆ, ಸರ್ಕಾರದಿಂದ ಇಥೆನಲ್ ಪೇಮೆಂಟ್ ಬಂದಿಲ್ಲ ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ. ಸಾಲ ಸೂಲ ಮಾಡಿದ ರೈತರಿಗೆ ಆಗುತ್ತಿರುವ ನಷ್ಟವನ್ನು ಕಾರ್ಖಾನೆಯವರೇ ಭರಿಸಬೇಕು. ಇಲ್ಲವಾದಲ್ಲಿ ಅವರ ಮೈಲಾರ್ ಶುಗರ್ಸ್ ಪರವಾನಿಗೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ತುಂಬಾ ಕಷ್ಟವಾಗಿದ್ದು, ಮುಂದಿನ ಬೆಳೆಗಳಿಗೆ ಗೊಬ್ಬರ, ಔಷಧಿಗಳನ್ನು ಕೊಡಲು ತುಂಬಾ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗನೆ ಕಾರ್ಖಾನೆಯ ಮಾಲೀಕರನ್ನು ಕರೆಯಿಸಿ, ವಿಚಾರಿಸಿ ಬಾಕಿ ಹಣವನ್ನು ಕೂಡಲೇ ಕೊಡಿಸಬೇಕು. ಕೃಷಿ ಇಲಾಖೆಯಲ್ಲಿ ಸಬ್ಸಿಸಿಡಿ ರೂಪದಲ್ಲಿ ಬರುವಂತಹ ಸೆಣಬಿಗೆ ಬರಬೇಕಾದಂತಹ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿ, ಸೆಣಬಿನ ಬೀಜ ವಿತರಿಸಬೇಕು. ಈ ಸರ್ಕಾರದಲ್ಲಿ ಗೊಬ್ಬರವಾಗಲಿ, ಔಷಧಿ ವಿತರಣೆ, ಕೃಷಿಹೊಂಡಗಳ ನಿರ್ಮಾಣಗಳಾಗಲಿ. ತುಂಗಭದ್ರ ಜಲಾಶಯದ ಕ್ರಸ್ಟ್ಗೇಟ್‌ಗಳನ್ನು ಆದಷ್ಟು ಬೇಗ ಅಳವಡಿಕೆಯಾಗಬೇಕು. ಎರಡನೇ ಬೆಳೆ ಬೆಳೆಯದ ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರೂ.ನಂತೆ ಪರಿಹಾರವನ್ನು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ತುಂಗಭದ್ರ ಮಂಡಳಿಯ ಆಡಳಿತ ಕಚೇರಿಗೆ ಬೀಗ ಹಾಕುವ ಮುಖಾಂತರ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.