ಹೊಸಪೇಟೆಯಲ್ಲಿ ಶುಕ್ರವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಣ್ಮುಖ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಅಧ್ಯಕ್ಷ ಡಾ.ಪ್ರಮೋದ್, ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಗೌರಮ್ಮ ಪ್ರಮುಖರಾದ ನಾಗಮ್ಮ, ಮಹೇಶ್ವರಿ, ನೇತ್ರಾವತಿ, ಗೌರಿ ಇತರರಿದ್ದರು.
- ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿAದ ಮನವಿ
ಹೊಸಪೇಟೆ: ಬಾಕಿಯಿರುವ ಪ್ರೋತ್ಸಾಹ ಧನ ಹಾಗೂ ನಿಶ್ಚಿತ ಗೌರವ ಧನ ಕೂಡ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿAದ ನಗರದಲ್ಲಿ ಶುಕ್ರವಾರ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಣ್ಮುಖ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಅದು ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಶುಲ್ಕ ಕೂಡ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಕಳೆದ ಮುರು ತಿಂಗಳು ವೇತನವಿಲ್ಲದೆ ಆಶಾಗಳ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಆರೋಗ್ಯ ಇಲಾಖೆ ಈ ವಿಷಯದಲ್ಲಿ ತುರ್ತು ಪರಿಹಾರ ನೀಡುವುದರಲ್ಲಿ ವಿಪಲವಾಗಿದೆ. ಹಗಲು ರಾತ್ರಿ ಸಮಾಜದ ಆರೋಗ್ಯಕ್ಕಾಗಿ ದುಡಿಯುವ ಆಶಾಗಳನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ. ತಾಂತ್ರಿಕ ಸಮಸ್ಯೆ ಎಂದು ಕಾರಣ ಕೊಟ್ಟು ವೇತನ ಹಾಕುವುದನ್ನು ಮುಂದೂಡುವುದು, ಸರಿಯಾದ ಕ್ರಮವಲ್ಲ. ಕೂಡಲೆ ಬಾಕಿಯಿರುವ ಪ್ರೋತ್ಸಾಹ ಹಾಗೂ ನಿಶ್ಚಿತ ಗೌರವ ನೀಡಬೇಕು ಎಂದು ಆಗ್ರಹಿಸಿದರು.