ಗಂಟೆ ಸೋಮಶೇಖರ್ 
ವಿಜಯನಗರ

ಕುರುಬರ ಪೂಜಾರಿಗಳು ಶಿಬಿರಕ್ಕೆ ಭಾಗವಹಿಸಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕನಕ ಗುರುಪೀಠ ಧರ್ಮದರ್ಶಿ ಗಂಟೆ ಸೋಮಶೇಖರ್ ಹೇಳಿಕೆ
ಹೊಸಪೇಟೆ: ರಾಯಚೂರಿನ ತಿಂಥಣಿ ಬ್ರಿಡ್ಜ್ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12, 13 ಮತ್ತು 14 ರಂದು ಪೂಜಾರಿಗಳ ಶಿಬಿರದಲ್ಲಿ ಮತ್ತು ಸಾಹಿತ್ಯ ಸಮಾವೇಶದಲ್ಲಿ ನಡೆಯಲಿದೆ ಎಂದು ಧರ್ಮದರ್ಶಿ ಗಂಟೆ ಸೋಮಶೇಖರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀ ಮಠದಲ್ಲಿ ಪ್ರತಿವರ್ಷ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿತ್ತು. ಮೂರು ದಿನಗಳ ಕಾರ್ಯಕ್ರಮವನ್ನು ರಾಜಕೀಯೇತರವಾಗಿ ಆಯೋಜಿಸಲಾಗಿದೆ. ಶ್ರೀ ಬೀರದೇವರು, ಶ್ರೀ ರೇವಣಸಿದ್ದೇಶ್ವರರ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಮಾಳಿಂಗರಾಯ ಶ್ರೀ ಅಮೋಘಸಿದ್ದೇಶ್ವರರ ದೇಗುಲದಲ್ಲಿ ಪೂಜಾರಿಗಳು ಯಾವುದೇ ಪೂಜಾ ಪದ್ಧತಿ ಗೊತ್ತಿಲ್ಲದ ಕಾರಣ, ಭಕ್ತರು ದೇಗುಲಗಳ ಒಡನಾಟವನ್ನು ಬಿಡುತ್ತಿದ್ದಾರೆ. ಮತ್ತು ಇತರೆ ದೇಗುಲಗಳಿಗೆ ಮಾರು ಹೋಗುತ್ತಿದ್ದಾರೆ ಎಂದರು.
ಪೂಜಾರಿಗಳಿಗೆ ಪೂಜಾ ಪದ್ಧತಿ ಮತ್ತು ಮಂತ್ರಗಳನ್ನು ಕಲಿಸುವ ಉದ್ದೇಶದಿಂದ ಈ ವರ್ಷ ಮೂರುದಿನಗಳ ಕಾಲ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ, ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯದ ಪೂಜಾರಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ. ಕುರುಬ ಸಮುದಾಯದ ಮುಖಂಡರು ತಮ್ಮ ದೇಗುಲದ ಪೂಜಾರಿಗಳನ್ನು ಶಿಬಿರಕ್ಕೆ ಕರೆತರುವ ಸೇವೆ ಮಾಡಬೇಕಿದೆ. ಅಲ್ಲದೆ, ಮೂರೂ ದಿನಗಳ ಕಾಲ ಹಾಲುಮತ ಧರ್ಮದ ಬಗ್ಗೆ, ವಿವಿಧ ದೇವರ, ಸಿದ್ದಪುರುಷರ ಬಗ್ಗೆ, ಸಾಹಿತ್ಯ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದರು.
ಪ್ರಮುಖರಾದ ನಿಂಗಪ್ಪ, ವೆಂಕಟೇಶ, ತಾಯಪ್ಪ, ಬಣಕಾರ್ ಗಣೇಶ್, ಮಂಜುನಾಥ, ಗೋಪಾಲ್ ಕೃಷ್ಣ ಇತರರಿದ್ದರು.