ಕಾನಹೊಸಹಳ್ಳಿಯಲ್ಲಿ ಶ್ರೀ ಪಾಂಡುರಂಗ ದಿಂಡಿ ಉತ್ಸವದ ನಿಮಿತ್ತ ಮೆರವಣಿಗೆ ನಡೆಯಿತು.  
ವಿಜಯನಗರ

ಪಾಂಡುರಂಗ ದಿಂಡಿ ಉತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಪಾಂಡುರಂಗ ದಿಂಡಿ ಉತ್ಸವ

ಪಾಂಡುರಂಗ ದಿಂಡಿ ಉತ್ಸವ ಸಂಪನ್ನ

ಕಾನಹೊಸಹಳ್ಳಿ: ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ 12ನೇ ವರ್ಷದ ಶ್ರೀ ಪಾಂಡುರಂಗ ದಿಂಡಿ ಉತ್ಸವ ಸಡಗರದಿಂದ ಜರುಗಿತು.
ಬೆಳಗ್ಗೆ ಕಾಕಡಾರತಿ, ಪಾರಾಯಣ ಸೇರಿದಂತೆ ಇತರ ಧಾರ್ಮಿಕ ಕೈಂಕರ್ಯ ನೆರವೇರಿದವು. ಬಳಿಕ ಅಲಂಕೃತ ಪಾಂಡುರಂಗ ವಿಠಲ ದೇವರ ಭಾವಚಿತ್ರವನ್ನು ಕಳಸ-ಕುಂಭದೊಂದಿಗೆ ಮೆರವಣಿಗೆ ಮಾಡಲಾಯಿತು.
ಸಾಮೂಹಿಕ ಭಜನೆ, ವಾದ್ಯವೃಂದ ಮೇಳೈಸಿದವು. ದೇವಸ್ಥಾನದಲ್ಲಿ ಕೀರ್ತನೆ ಮತ್ತು ಯಲ್ಲಮ್ಮನ ಕಥೆ ಹೇಳಲಾಯಿತು. ಮಂಗಳಾರತಿ ಬಳಿಕ ದಿಂಡಿ ಉತ್ಸವ ಸಂಪನ್ನಗೊಂಡಿತು.
ಪ್ರಮುಖರಾದ ಮರಿಬಿಹಾಳ್ ಹನುಮಂತಜ್ಜ, ಶಿವಪುರ ರಾಜಣ್ಣ, ನಾಗಪ್ಪ, ಸಣ್ಣ ನಾಗಪ್ಪ, ಗುಂಡಜ್ಜರ ತಿಪ್ಪೇರುದ್ರಪ್ಪ, ಬೇಲಿಗೌಡ್ರು ಮಾರಪ್ಪ, ಕೆ.ನಾಗಪ್ಪ, ಲೋಕಿಕೆರೆ ದುರ್ಗಪ್ಪ, ಈ.ಮೂರ್ತಿ, ದಾಸಪ್ಪರು ಪರಸಪ್ಪ, ನೀರುಗಂಟೆ ಸುರೇಶ್, ಸಿ.ಬಿ.ನಾಗೇಶ್, ಮಾಂತಪ್ಪ, ಶೇಖರಪ್ಪ ಎಸ್., ಎರ‌್ರಿಸ್ವಾಮಿ, ಮಲಿಯಪ್ಪ, ಹನುಮಂತಪ್ಪ, ತೆಲುಗು ಮಹಾಂತೇಶ್, ರಾಜಪ್ಪ ಇತರರಿದ್ದರು.