ಕಂಪ್ಲಿ ವೀರಶೈವ ಲಿಂಗಾಯತ ಮಹಾವೇದಿಕೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಪ್ರಮುಖರಾದ ಹೊಸಕೋಟೆ ಜಗದೀಶ್, ಬಿ.ವಿ.ಗೌಡ, ಬಳೆ ಮಲ್ಲಿಕಾರ್ಜುನ, ಎಸ್.ಎಂ.ನಾಗರಾಜ, ಪಿ.ಮೂಕಯ್ಯಸ್ವಾಮಿ ಇತರರಿದ್ದರು.
ಕಂಪ್ಲಿ: ಎಸ್ಸೆಸ್ಸೆಲ್ಸಿ- ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ ತಾಲೂಕಿನ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ, ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.11ರಂದು ಪಟ್ಟಣದ ವೀರಶೈವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಹೇಳಿದರು.
ವೀರಶೈವ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರು ಮಹಾ ವೇದಿಕೆಯ ತಾಲೂಕು ಕಚೇರಿಯ ಉದ್ಘಾಟಿಸಲಿದ್ದಾರೆ. ರಾಜ್ಯಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ವೀರಶೈವ ಲಿಂಗಾಯತರು ಸಂಘಟಿತರಾಗಿ ಕಾರ್ಯಕ್ರಮ ನೆರವೇರಿಸಬೇಕು ಎಂದರು.
ವೀರಶೈವ ಸಂಘದ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಪ್ರಮುಖರಾದ ಬಿ.ವಿ.ಗೌಡ, ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಕಲ್ಗುಡಿ ವಿಶ್ವನಾಥ, ಬೇರ‌್ಗಿ ಮಹೇಶಗೌಡ, ಅಳ್ಳಳ್ಳಿ ವೀರೇಶ, ಎಲಿಗಾರ ವೆಂಕಟರೆಡ್ಡಿ, ವಾಲಿ ಕೊಟ್ರಪ್ಪ, ಜಿ.ಲಿಂಗನಗೌಡ, ಇಟಗಿ ಬಸವರಾಜಗೌಡ, ವಿ.ವಿದ್ಯಾಧರ, ಎಸ್.ಚಂದ್ರಶೇಖರಗೌಡ, ಮನೋಜಗೌಡ, ಶಂಬುಲಿಂಗ ಇತರರಿದ್ದರು.