ಹರಪನಹಳ್ಳಿಯಲ್ಲಿ ಕೊಲಂಬೋ ಸಮುದಾಯ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಮನವಿ ಸಲ್ಲಿಸಿತು. ಗೋರ್ ಸೇನಾ ಜಿಲ್ಲಾಧ್ಯಕ್ಷ ರಾಜುನಾಯ್ಕ, ಕೊರಚ ಸಮಾಜ ತಾಲೂಕು ಅಧ್ಯಕ್ಷ ಹೊನ್ನಪ್ಪ, ಪ್ರಮುಖರಾದ ಪ್ರಕಾಶ್ ಮಹಾರಾಜ್, ಎಸ್.ಪಿ. ಲಿಂಬ್ಯಾನಾಯ್ಕ, ಅಗ್ರಹಾರ ಅಶೋಕ, ಶಿರಗಾನಹಳ್ಳಿ ವಿಶ್ವನಾಥ, ಅಗ್ರಹಾರ ರವಿ, ಸತೀಶ್ ನಾಯ್ಕ, ಕಿರಣ್ ನಾಯ್ಕ, ಎಚ್.ಜಗದೀಶ್ ನಾಯ್ಕ ಇತರರಿದ್ದರು. 
ವಿಜಯನಗರ

ಹಳೇ ಮೀಸಲು ಪದ್ಧತಿ ಮುಂದುವರಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಹರಪನಹಳ್ಳಿಯಲ್ಲಿ ಕೊಲಂಬೋ ಸಮುದಾಯದಿಂದ ಪ್ರತಿಭಟನೆ

ಹರಪನಹಳ್ಳಿ;

ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸಮುದಾಯಗಳನ್ನು ಗುಂಪುಗಳಾಗಿ ವರ್ಗೀಕರಿಸಿ ಅವೈಜ್ಞಾನಿಕ ಒಳಮೀಸಲಾತಿ ಜಾರಿಗೊಳಿಸಿದೆ ಎಂದು ಆರೋಪಿಸಿ ಕೊಲಂಬೋ ಸಮುದಾಯಗಳಿಂದ ಶನಿವಾರ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರ ಕೊಲಂಬೋ ಸಮುದಾಯಗಳ ಜತೆ 59 ಅಲೆಮಾರಿ ಸಮುದಾಯಗಳನ್ನು ಸೇರ್ಪಡೆ ಮಾಡಿ ಇರುವ ಮೀಸಲಾತಿಯಲ್ಲಿ ಪಾಲು ನೀಡುವ ಮೂಲಕ ಸಂವಿಧಾನದ ಆಶಯಕ್ಕೆ ಪೆಟ್ಟು ನೀಡಿದೆ. ಪ್ರಸ್ತುತ ಹೊರಡಿಸಿರುವ ಹಲುವು ಹುದ್ದೆಗಳ ನೇಮಕಾತಿ ಅಧಿಸೂಚನೆಗಳಲ್ಲಿ ರೋಸ್ಟರ್ ಬಿಂದುವಿನ ಹುದ್ದೆಗಳಲ್ಲಿಯೂ ಅಲೆಮಾರಿ ಸಮುದಾಯಕ್ಕೂ ಆದ್ಯತೆ ನೀಡಿದೆ. ಇದರಿಂದ ಕೊಲಂಬೋ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಒಂದು ಹುದ್ದೆಯೂ ಸಿಗುವುದಿಲ್ಲ ಎಂದು ದೂರಿದರು.
ಅವೈಜ್ಯಾನಿಕ ಒಳಮೀಸಲಾತಿ ಹಂಚಿಕೆ ಹಾಗೂ ರೋಸ್ಟರ್ ಬಿಂದು ಆದೇಶ ರದ್ದುಗೊಳಿಸಿ ಹಳೇ ಮೀಸಲಾತಿ ಮುಂದುವರಿಸಬೇಕು. ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು. ಅಲೆಮಾರಿ ಸಮುದಾಯದ 59 ಉಪಜಾತಿಗಳನ್ನು ಸಿ ಗುಂಪಿನಿಂದ ಪ್ರತ್ಯೇಕಗೊಳಿಸಿ ಶೇ.1 ಮೀಸಲು ನೀಡಬೇಕು.
ವಿವಿಧ ಇಲಾಖೆಗಳಲ್ಲಿ ನೇಮಕಾತಿ ರೋಸ್ಟರ್ ಬಿಂದುವಿನಲ್ಲಾಗಿರುವ ಲೋಪಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು. ಒಳಮೀಸಲಾತಿ ಹಂಚಿಕೆಯ ಪ್ರಕರಣಗಳ ತೀರ್ಪು ಇತ್ಯರ್ಥ ಆಗುವವರೆಗೆ ಹಳೇ ಮೀಸಲಾತಿಯಂತೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.