ಹೊಸಪೇಟೆಯಲ್ಲಿ ಪ್ರತಿದಿನ ದಿನ ಪತ್ರಿಕೆ ಹಾಕುವ ಕೆ.ವಿನೋದ್. 
ವಿಜಯನಗರ

ಪತ್ರಿಕೆ ಹಾಕುವ ಹುಡುಗ ಮಿನಿ ಒಲಿಂಪಿಕ್‌ಗೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಮಿನಿ ಒಲಿಂಪಿಕ್ ಕ್ರೀಡಾಕೂಟ 2026ಕ್ಕೆ ಕೆ.ವಿನೋದ್ ಆಯ್ಕೆ
ಹೊಸಪೇಟೆ: ನಗರದಲ್ಲಿ ಪ್ರತಿದಿನ ಪತ್ರಿಕೆ ಹಾಕುವ ಕೆ.ವಿನೋದ್ ಕರ್ನಾಟಕ ಮಿನಿ ಒಲಿಂಪಿಕ್ ಕ್ರೀಡಾಕೂಟ 2026ಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂ ಪಿಕ್ ಅಸೋಸಿಯೇಷನ್ ಸಹ ಯೋಗದಲ್ಲಿ ಆಯೋಜಿಸಲಾಗುತ್ತಿರುವ ಮಿನಿ ಒಲಿಂಪಿಕ್ ಕ್ರೀಡಾಕೂಟವು 2026ರ ಜ.16ರಿಂದ 22ರವರೆಗೆ ತುಮಕೂರಿನಲ್ಲಿ ನಡೆಯಲಿದೆ. ಈ ಕ್ರೀಡಾಕೂಟದ 14 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕೆ.ವಿನೋದ್ ಅವರು ಟೇಕ್ವಾಂಡೋ ವಿಭಾಗದಲ್ಲಿ ವಿಜಯನಗರ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಹೊಯ್ಸಳ ಕರಾಟೆ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದಾನೆ. ಕಠಿಣ ಪರಿ ಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದಿಂದ ಈ ಸಾಧನೆ ಮಾಡಿದ್ದಾರೆ. ದಿನನಿತ್ಯದ ವಿದ್ಯಾಭ್ಯಾಸದ ಜತೆಗೆ ಬೆಳಗಿನ ಜಾವ ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತಾ ತರಬೇತಿಯನ್ನು ಮುಂದುವರಿಸಿರುವುದು ವಿಶೇಷವಾಗಿದೆ.