ಹಗರಿಬೊಮ್ಮನಹಳ್ಳಿ ಪುರಸಭೆ ಉಪಾಧ್ಯಕ್ಷರಾಗಿ ನೇತ್ರಾವತಿ ಹುಚ್ಚಪ್ಪ ಸೆರೆಗಾರ ಗುರುವಾರ ಆಯ್ಕೆಯಾದರು.  
ವಿಜಯನಗರ

ಹಬೊಹಳ್ಳಿ ಪುರಸಭೆಗೆ ನೇತ್ರಾವತಿ ಸೆರೆಗಾರ್ ಉಪಾಧ್ಯಕ್ಷೆ

ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಉಪಾಧ್ಯಕ್ಷರಾಗಿ 20ನೇ ವಾರ್ಡ್ ಸದಸ್ಯೆ ನೇತ್ರಾವತಿ ಹುಚ್ಚಪ್ಪ ಸೆರೆಗಾರ್ ಅವಿರೋಧವಾಗಿ ಗುರುವಾರ ಆಯ್ಕೆಯಾದರು.
ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ನಲ್ಲಿ ಈ ವರ್ಗದ ಇಬ್ಬರು ಸದಸ್ಯೆಯರು ಇರುವುದರಿಂದ ಅಧಿಕಾರ ಹಂಚಿಕೆ ಮಾಡಲಾಗಿದ್ದು, ಮೊದಲ ಅವಧಿಗೆ ಅಂಬಿಕಾ ದೇವೇಂದ್ರಪ್ಪ ಉಪಾಧ್ಯಕ್ಷರಾಗಿದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ 18 ಸದಸ್ಯರು ಹಾಜರಿದ್ದರು. ಸಹಾಯಕ ಆಯುಕ್ತ ವಿವೇಕಾನಂದ ಚುನಾವಣಾಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಪುರಸಭೆ ಅಧ್ಯಕ್ಷ ಎಂ.ಮರಿ ರಾಮಪ್ಪ, ಸದಸ್ಯರಾದ ಎಲ್.ಗಣೇಶ, ಅಜೀಜುಲ್ಲಾ, ಟಿ.ಇಸ್ಮಾಯಿಲ್, ಬಿ.ಗಂಗಣ್ಣ, ನಾಗರಾಜ್ ಜನ್ನು, ದೀಪಕ್ ಕಠಾರೆ, ರಾಜೇಶ್ ಬ್ಯಾಡಗಿ, ರೇಷ್ಮಾ ಸಿಕಂದರ್, ಖಾಜಾ ಬನ್ನಿ ಅಲ್ಲಾಭಕ್ಷಿ, ಎಚ್.ಎಂ.ಚನ್ನಮ್ಮ ವಿಜಯಕುಮಾರ್, ಅಂಬಿಕಾ ದೇವೇಂದ್ರಪ್ಪ, ಮಂಜುಳಾ ಕೃಷ್ಣನಾಯ್ಕ ಮತ್ತಿತರರು ಇದ್ದರು.