ಹಗರಿಬೊಮ್ಮನಹಳ್ಳಿ ಪುರಸಭೆ ಹಂಗಾಮಿ ಅಧ್ಯಕ್ಷೆಯಾಗಿ ಉಪಾಧ್ಯಕ್ಷೆ ನೇತ್ರಾವತಿ ಸೆರೆಗಾರ ಅಧಿಕಾರ ವಹಿಸಿಕೊಂಡರು.  
ವಿಜಯನಗರ

ನೇತ್ರಾವತಿ ಸೆರೆಗಾರ ಹಂಗಾಮಿ ಅಧ್ಯಕ್ಷೆ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ನೇತ್ರಾವತಿ ಸೆರೆಗಾರ ಹುಚ್ಚಪ್ಪ ಬುಧವಾರ ಅಧಿಕಾರ ಸ್ವೀಕರಿಸಿದರು.
ಅಧ್ಯಕ್ಷ ಎಂ.ಮರಿರಾಮಪ್ಪ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಮಾತನಾಡಿ, ಮುನ್ಸಿಪಾಲ್ ಕಾಯ್ದೆ ಅನ್ವಯ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಾಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಂಗಾಮಿ ಅಧ್ಯಕ್ಷೆ ನೇತ್ರಾವತಿ ಸೆರೆಗಾರ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಹಾಗೂ ಮೂಲ ಸೌಲಭ್ಯಗಳ ಪರಿಹಾರಕ್ಕೆ ಗಮನಹರಿಸಲಾಗುವುದು ಎಂದರು. ಪುರಸಭೆ ಸದಸ್ಯ ನವೀನ್ ಕುಮಾರ, ಅಜೀಜುಲ್ಲಾ, ಗಣೇಶ, ಪ್ರಮುಖರಾದ ಹುಚ್ಚಪ್ಪ ಸೆರೆಗಾರ್, ಎಚ್.ಎಂ.ವಿಜಯ ಕುಮಾರ, ಅಲ್ಲಾಭಕ್ಷಿ, ಪುರಸಭೆ ಕಂದಾಯ ಮಾರೆಪ್ಪ, ಹಿರಿಯ ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ ಇದ್ದರು.