- ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ಡಿ.14ರಂದು
ಹೊಸಪೇಟೆ: ನಗರದ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ಡಿ.14ರಂದು ಬೋಧಾವ್ಯ 2025 : ವಿದ್ಯಘ್ನಿಕರ್ಮ ರಾಷ್ಟ್ರೀಯ ಕಾರ್ಯಾಗಾರ ನಡಿಯಲಿದೆ ಎಂದು ಭಾರತ ಆಯುಷ್ ಒಕ್ಕೂಟದ ಅಧ್ಯಕ್ಷ ಡಾ.ಬಿ.ವಿ.ಭಟ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುಣೆಯ ಆಯುರ್ವೇದ ತಜ್ಞ ಡಾ.ಚಂದ್ರ ಕುಮಾರ ದೇಶಮುಖ್ ಮಾರ್ಗದರ್ಶದಲ್ಲಿ ಆಯುಷ್ ಶಿಬಿರ, ತರಬೇತಿ ಕಾರ್ಯಕ್ರಮ ನಡೆಯಲಿದೆ. ನಮ್ಮ ದೇಶಿ ವೈದ್ಯಕೀಯ ಪದ್ದತಿಯನ್ನು ಜಾಗೃತಿ ಮಾಡುವುದಕ್ಲಾಗಿ ಕಾರ್ಯಗಾರ ನಡೆಸಲಾಗುತ್ತಿದೆ. ರಾಜ್ಯ ಸೇರಿದಂತೆ ದೇಶಾದ್ಯಾಂತ 300 ರಿಂದ 450 ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. 50 ರಿಂದ 70 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಆಯುಷ್ ವೈದ್ಯಾರಾದ ಡಾ.ಟಿ.ಎಂ.ಗುರುಮಾಹAತೇಶ್, ಡಾ.ಸಿಕಂದರ್ ಭಾಷಾ, ಮುನಿವಾಸುದೇವರೆಡ್ಡಿ, ಗುರುಬಸವರಾಜ್, ಆನಂದ್, ದಾಸುರಾವ್, ಶಬ್ಬಿರ್ ಅಹ್ಮದ್ ಇತರರಿದ್ದರು.