ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಅಖಿಲ ಭಾರತ ಕಿಸಾನ್‌ಸಭಾ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ ಚಾಲನೆ ನೀಡಿದರು. ಕಜಾಪ ತಾಲೂಕು ಅಧ್ಯಕ್ಷ ಕೆ.ಯಂ.ವೀರೇಶ, ಶಿಕ್ಷಕಿ ಶಾಂಭವಿ, ಕಲಾವಿದರಾದ ಬಾಣದ ನರಸಿಂಹಪ್ಪ, ಅಗಸಗಟ್ಟಿ ತಿಂದಪ್ಪ, ಎಚ್.ವೀರಣ್ಣ ಇತರರಿದ್ದರು.  
ವಿಜಯನಗರ

ಸಂಗೀತ ಆಲಿಸುವುದರಿಂದ ಮನಸ್ಸಿಗೆ ಉಲ್ಲಾಸ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಕಿಸಾನ್ಸಭಾ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ ಅಭಿಪ್ರಾಯ

ಕೂಡ್ಲಿಗಿ:

ಸಂಗೀತದಿಂದ ಮನಸ್ಸು ಪ್ರಫುಲ್ಲಗೊಳ್ಳುವ ಜತೆ ನೆಮ್ಮದಿ ದೊರಕುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ ಅಭಿಪ್ರಾಯಪಟ್ಟರು.

ಪೇಟೆ ಬಸವೇಶ್ವರ ಸಂಗೀತ ಶಾಲೆ ಸಾಂಸ್ಕೃತಿಕ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಸಂಗೀತ ಆಲಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ನಮ್ಮ ಪೂರ್ವಜರು ಜಾನಪದ ಸಾಹಿತ್ಯದ ಮೂಲಕ ಮನರಂಜನೆ ಪಡೆಯುತ್ತಿದ್ದರು. ದೇವರ ಭಜನೆ, ವಚನ, ದಾಸರ ಪದಗಳು ಕೇಳಿ ಬೇಸರ ಶಮನಗೊಳಿಸಿಕೊಳ್ಳುತ್ತಿದ್ದರು. ಹಗಲೆಲ್ಲ ದುಡಿದು ಬಂದ ಮನಗಳು ಮನರಂಜನೆಗಾಗಿ ಬಯಲಾಟ, ನಾಟಕ, ದೇವಿಕಥೆ, ಪುರಾಣ ಪುಣ್ಯಕಥೆಗಳ ಮೊರೆ ಹೋಗುತ್ತಿದ್ದರು. ಆಗಿನ ಕಾಲದಲ್ಲಿ ಸಂಗೀತಕ್ಕೆ ರಾಜಾಶ್ರಯ ದೊರೆಯುತ್ತಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಕರ್ಕಶ ಸಂಗೀತಕ್ಕೆ ಜನರು ಮಾರುಹೋಗಿ ಅದಕ್ಕಿದ್ದ ಮೌಲ್ಯವನ್ನು ಹಾಳು ಮಾಡಿರುವುದು ಬೇಸರದ ಸಂಗತಿ ಎಂದರು.
ಪ್ರಮುಖರಾದ ಬಿ.ನಾಗರಾಜ, ಬಿ.ಶಾಂತಾ, ತುಪ್ಪಳ್ಳಿ ಕೊಟ್ರೇಶ, ಶಾರದಾ, ರಕ್ಷಿತ್, ಮನೋಜಕುಮಾರ್ ಇದ್ದರು. ಕಾರ್ಯಕ್ರಮದಲ್ಲಿ ಕೆ.ಶಂಕರ್ ಸುಗಮ ಸಂಗೀತ ನೆರವೇರಿಸಿದರು. ಪರಶುರಾಮ ಹಾರ್ಮೋನಿಯಂ, ಅನೀಲ್ ಪ್ಯಾಡ್, ಸಿ.ಎಂ.ಚನ್ನವೀರಸ್ವಾಮಿ ತಬಲ ಸಾಥ್ ನೀಡಿದರು.