ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾದ ಊಟವನ್ನು ಕಾಲ್ದುಳಿನಲ್ಲಿ ಊಟ ಮಾಡಿದರು. 
ವಿಜಯನಗರ

ಕಾಲ್ದುಳಿನಲ್ಲಿ ಮಕ್ಕಳಿಗೆ ಊಟ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಗಣರಾಜ್ಯೋತ್ಸವ ದಿನಾಚರಣೆ ವೇಳೆ ಶಿಕ್ಷಣ ಇಲಾಖೆ ಬೇಜವಾಬ್ದಾರಿ
ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ನೀಡಲಾದ ಊಟದಲ್ಲಿ ಅವ್ಯವಸ್ಥೆ ಕಂಡು ಬಂತು. ನೂರಾರು ಮಕ್ಕಳು ಕಾಲ್ದುಳಿನಲ್ಲಿ ಊಟ ಮಾಡಿದರು.
ಮಕ್ಕಳಿಗೆ ಚಿಕ್ಕಂದಿನಿAದ ಯಾವ ರೀತಿಯ ಆಹಾರ ಪದ್ಧತಿಯನ್ನು ರೂಢಿ ಮಾಡುತ್ತೇವೆಯೋ ಅದನ್ನೇ ದೊಡ್ಡವರಾದ ಮೇಲೂ ಮುಂದುವರಿಸುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಿದ್ದಾಗಲೇ ಶುದ್ಧ ಹಾಗೂ ಪೌಷ್ಟಿಕ ಆಹಾರವನ್ನು ತಿನ್ನಿಸುವ ಅಭ್ಯಾಸ ಬೆಳೆಸಬೇಕು ಎಂದು ಜಾಗೃತಿ ಮೂಡಿಸುವ ಶಿಕ್ಷಣ ಇಲಾಖೆ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಮಾಡಿತು. ಅದು ಕೂಡ ಪ್ರತಿದಿನ ಶಾಲೆಗಳಿಗೆ ಸರಬರಾಜು ಮಾಡುವ ಖಾಸಗಿ ಸಂಸ್ಥೆಯಿAದ ತರೆಸಿಕೊಂಡಿದೆ. ಆದರೆ, ಮಕ್ಕಳಿಗೆ ಊಟ ನೀಡುವಾಗ ಕನಿಷ್ಠ ಮುನ್ನೆಚ್ಚರಿಕೆ ಕ್ರಮಕೈಗೊಂಡು ಊಟ ಬಡಿಸಬೇಕಿತ್ತು. ಕಾರ್ಯಕ್ರಮದ ವೇದಿಕೆ ಮುಂದೆ ಮಕ್ಕಳಿಗೆ ಕೂರಲು ಶಾಮಿಯಾನ ಹಾಕಲಾಗಿತ್ತು. ಮಕ್ಕಳ ತಿನ್ನುವ ಊಟದ ಸ್ಥಳದಲ್ಲಿ ಕೆಳಗಡೆ ಮ್ಯಾಟ್ ಹಾಕಿ ಶಾಮಿಯಾನ ಕೂಡ ಹಾಕಬೇಕಿತ್ತು. ಆದರೆ, ಇದು ಇರದೇ ನೂರಾರು ಮಕ್ಕಳು ಕಾಲ್ದುಳಿನಲ್ಲಿ ಊಟ ಮಾಡುವಂತಾಯಿತು. ಇನ್ನು ಊಟದ ನಂತರ ಕುಡಿವ ನೀರಿನ ವ್ಯವಸ್ಥೆ ಕೂಡ ಮಾಡದೇ ಶಿಕ್ಷಣ ಇಲಾಖೆ ಬೇಜವಾಬ್ದಾರಿ ತೋರಿತು. ಕೈ ತೊಳೆಯಲು ತಂದಿದ್ದ ಟ್ಯಾಂಕರ್ ಗಳಿಗೆ ಮಕ್ಕಳು ಮುಗಿಬಿದ್ದು ನೀರು ಕುಡಿದರು. ಶುದ್ಧ ಹಾಗೂ ಶುದ್ಧ ಹಾಗೂ ಪೌಷ್ಟಿಕ ಆಹಾರವನ್ನು ತಿನ್ನಿಸುವ ಅಭ್ಯಾಸ ಬೆಳೆಸಬೇಕು ಎಂದು ಜಾಗೃತಿ ನೀಡುವ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.