ಗಾಣಗಟ್ಟೆ ಮಾಯಮ್ಮದೇವಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಉಜ್ಜಿನಿ: ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮದೇವಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವಕ್ಕೂ ಮುನ್ನ ದೇವಿಯ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ತಂದು ರಥದ ಸುತ್ತ ಮೂರು ಸಲ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ದೇವಿ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡರು. ಭಕ್ತರು ಹಗ್ಗದ ಸಹಾಯವಿಲ್ಲದೆ ಪಾದಗಟ್ಟೆವರೆಗೆ ರಥ ಎಳೆದು ಪೂಜೆ ನೆರವೇರಿಸಿದರು.