ಹಗರಿಬೊಮ್ಮನಹಳ್ಳಿ ಹಳೇ ಊರಿನ ಶ್ರೀ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಅಧಿಕ ಮಾಸದ ನಿಮಿತ್ತ ಕುರುಹೀನಶೆಟ್ಟಿ ಸಮಾಜದಿಂದ ಮಹಿಳೆಯರಿಗೆ ಉಡಿ ತುಂಬಲಾಯಿತು.
ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಊರಿನ ಶ್ರೀ ನೀಲಕಂಠೇಶ್ವರ ದೇಗುಲದಲ್ಲಿ ಅಧಿಕ ಮಾಸದ ಅಂಗವಾಗಿ ಕುರುಹಿನ ಶೆಟ್ಟಿ ಸಮಾಜದಿಂದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಕುರುಹಿನ ಶೆಟ್ಟಿ ಸಮಾಜದ ಶಾರದಮ್ಮ ಭೀಮಪ್ಪ ಕಲ್ಗೋಡೆ ಮಾತನಾಡಿ, ಮಳೆ ಬೆಳೆ ಚೆನ್ನಾಗಿ ಆಗಲಿ. ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ನೆಮ್ಮದಿ ಜೀವನವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಪುರಸಭೆ ಸದಸ್ಯೆ ಅಂಗಡಿ ಮಂಗಳಾ ರವೀಂದ್ರಗೌಡ, ಪ್ರಮುಖರಾದ ಸಮಗಂಡಿ ಜಯಶ್ರೀ ನಾಗರಾಜ, ಸೋಡಾ ನಿಂಬಣ್ಣ, ಮಾಲವಿ ಮಲ್ಲಣ್ಣ, ಕೆ.ತೋಟಪ್ಪ, ಹಿರಾಳು ವಾಸಣ್ಣ, ಮಾಚಾಲಿ ನಾರಾಯಣಪ್ಪ, ಹಿರಾಳು ಶರಣಪ್ಪ, ಫೋಟೋಗ್ರಾಫರ್ ವಿಶ್ವನಾಥ್, ಅರ್ಚಕ ಸಂಗಪ್ಪ ಇದ್ದರು.