ಹೊಸಪೇಟೆ ಎಸ್ಪಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೇಕ್ ಕತ್ತರಿಸಿ ಅಂತರಾಷ್ಟಿçÃಯ ಮಹಿಳಾ ದಿನ ಆಚರಿಸಲಾಯಿತು. ನ್ಯಾಯಾಧೀಧರಾದ ಜೆ.ಚೈತ್ರ, ಶೃತಿ ತೇಲಿ, ಎಸ್ಪಿ ಜಾಹ್ನವಿ ಇತರರಿದ್ದರು. 
ವಿಜಯನಗರ

ಮಹಿಳೆಯರ ಹಕ್ಕುಗಳು ಸದ್ಬಳಕೆ ಆಗಲಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ದಿನಾಚರಣೆಯಲ್ಲಿ ಅಪರ ಸಿವಿಲ್ ನ್ಯಾಯಾಧೀಶೆ ಜೆ.ಚೈತ್ರ ಸಲಹೆ
ಹೊಸಪೇಟೆ: ಸಮಾಜದಲ್ಲಿ ಮಹಿಳೆಯರು ಕುಟುಂಬದ ನಿರ್ವಹಣೆ ಸೇರಿದಂತೆ ಹಲವಾರು ಒತ್ತಡಗಳ ನಡುವೆ ಅಪ್ರತಿಮ ಸಾಧನೆ ಮಾಡಿದ್ದಾರೆ.ಎಂದು ಅಪರ ಸಿವಿಲ್ ನ್ಯಾಯಾಧೀಶೆ ಜೆ.ಚೈತ್ರ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಹಿಳೆಯರಿಗೆ ನೀಡುವ ಸ್ಥಾನಮಾನ, ಅವರ ಹಕ್ಕುಗಳ ರಕ್ಷಣೆ ಹಾಗೂ ಗೌರವದ ಆಧಾರದ ಮೇಲೆ ದೇಶದ ಪ್ರಗತಿಯನ್ನು ಪರಿಗಣಿಸಲಾಗುತ್ತದೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಸಾಕಷ್ಟಿದೆ. ಮಹಿಳೆಯರು ಕೂಡ ಪುರುಷರಷ್ಟೆ ಸಬಲರು ಎಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಇರುವ ಹಕ್ಕುಗಳು ಸದ್ಬಳಕೆ ಆಗಲಿ. ನಮ್ಮ ಹಕ್ಕುಗಳಿಂದ ಬೇರೆಯವರ ಹಕ್ಕುಗಳಿಗೆ ಧಕ್ಕೆಯಾಗುವುದು ಬೇಡ. ಯಾವುದೇ ಮಹಿಳೆ ನಿಮ್ಮ ಬಳಿ ಸಹಾಯ ಕೇಳಿಕೊಂಡು ಬಂದರೆ ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದರು.
2ನೇ ಅಪರ ಸಿವಿಲ್ ನ್ಯಾಯಾಧೀಶೆ ಶೃತಿ ತೇಲಿ ಮಾತನಾಡಿ, ವಿವಿಧ ಕೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯನ್ನು ಸ್ಮರಿಸಲು ಹಗೂ ಸಾಧಕರನ್ನು ಗುರುತಿಸಿ, ಗೌರವಿಸಲು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಕುಟುಂಬ ವಿರ್ವಹಣೆ ಜತೆಗೆ ಪೊಲೀಸ್ ಕೆಲಸ ನಿಮಗೆ ಹೊರೆ ಆಗಬಹುದು. ಆದರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬಳಿ ಯಾರೇ ನ್ಯಾಯ ಕೇಳಿಕೊಂಡು ಬಂದರೂ, ನೊಂದವರ ಬಾಳಿಗೆ ನೀವು ಬೆಳಕಾಗುವ ಕೆಲಸ ಮಾಡಿ ಎಂದರು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಮಹಿಳೆಯರು ಹಲವಾರು ಸವಾಲುಗಳು ಮತ್ತು ಸಂಕಷ್ಟಗಳ ನಡುವೆ ಸಾಕಷ್ಟು ಸಾಧನೆ ಮಾಡಿದ್ದಾರೆ. ಅದಕ್ಕೆ ಮುಖ್ಯ ಕಾರಣ ಶಿಕ್ಷಣವಾಗಿದೆ. ಹೆಚ್ಚು ಹೆಚ್ಚು ಶಿಕ್ಷಣವಂತರಾಗುವ ಮೂಲಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಸಿಪಿಐಗಳಾದ ಡಿ.ಹುಲುಗಪ್ಪ, ಮಹಮದ್‌ಗೌಸ್ ಇತರರಿದ್ದರು.