ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಆಂಧ್ರ ಪ್ರದೇಶದ ಹಣಕಾಸು ಸಚಿವ ಪಯ್ಯವುಲ ಕೇಶವ್ ಬೇಟಿ ನೀಡಿ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ವೀಕ್ಷಿಸಿದರರು. ರಾಯದುರ್ಗ ಎಂಎಲ್ ಎ ಕಾಲವ ಶ್ರೀನಿವಾಸಲು, ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಇಇ ನಾರಾಯಣ ನಾಯ್ಕ ಇತರರಿದ್ದರು. 
ವಿಜಯನಗರ

ಮೇ ಅಂತ್ಯದ ಗೇಟ್ ಅಳವಡಿಕೆ ಪೂರ್ಣವಾಗಲಿ

ಪ್ರಮುಖ ಮುಖ್ಯಾಂಶಗಳು

  • ಟಿಬಿಡ್ಯಾಂ ಅಧಿಕಾರಿಗಳಿಗೆ ಆಂಧ್ರ ಪ್ರದೇಶದ ಹಣಕಾಸು ಸಚಿವ ಪಯ್ಯವುಲ ಕೇಶವ್ ಸೂಚನೆ
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಆಂಧ್ರ ಪ್ರದೇಶದ ಹಣಕಾಸು ಸಚಿವ ಪಯ್ಯವುಲ ಕೇಶವ್ ಬೇಟಿ ನೀಡಿ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ವೀಕ್ಷಿಸಿದರರು.
ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯದ ಕೈಗೆತ್ತಿಕೊಳ್ಳಲಾಗಿರುವ ಕ್ರಸ್ಟ್ಗೇಟ್‌ಗಳ ಆಧುನೀಕರಣ ಕಾಮಗಾರಿ ವೇಗವಾಗಿ ಸಾಗಿದೆ. ತಂತ್ರಜ್ಞರ ತಂಡ ಮತ್ತು ಮುಖ್ಯ ಎಂಜಿನಿಯರ್‌ಗಳ ಸಲಹೆಯಂತೆ ಅತ್ಯಂತ ಎಚ್ಚರಿಕೆಯಿಂದ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ಎಪ್ರೀಲ್ ಕೊನೆ ವಾರದಲ್ಲಿ ಎಲ್ಲ ಕ್ರಸ್ಟ್ಗೇಟ್‌ಗಳ ಅಳವಡಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೇ ಅಂತ್ಯದ ವೇಳೆಗೆ ಎಲ್ಲ ಗೇಟ್ ಅಳವಡಿಕೆ ಪೂರ್ಣಗೊಳ್ಳಲಿ ಎಂದರು.

17 ಗೇಟ್‌ಗಳ ಟ್ರಯಲ್ ರನ್

ಜಲಾಶಯದ ಒಟ್ಟು 33 ಕ್ರಸ್ಟ್ಗೇಟ್‌ಗಳ ಪೈಕಿ ಹಳೆಯ 30 ಗೇಟ್ ಗಳನ್ನು ತೆರವು ಆಗಿದೆ. ಮೂರು ಗೇಟ್ ಗಳ ತೆರವು ಪ್ರಗತಿಯಲ್ಲಿದೆ. ಇನ್ನು 31 ಹೊಸ ಕ್ರಸ್ಟ್ ಗೇಟ್ ಗಳ ತಾಯಾರಿಕೆ ಪೂರ್ಣವಾಗಿದೆ. ಎರಡು ಗೇಟ್ ಗಳ ತಯಾರಿಕೆ ಪ್ರಗತಿಯಲ್ಲಿದೆ. ಈ ಪೈಕಿ 21 ಗೇಟ್ ಗಳನ್ನು ಅಳವಡಿಕೆ ಪೂರ್ಣ ಆಗಿದ್ದು, 17 ಗೇಟ್ ಗಳ ಟ್ರಯಲ್ ರನ್ ನಡೆದಿದೆ. ಉಳಿದ ಗೇಟ್ ಗಳ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಹಳೆ ಚೈನ್ ಗಳಿಂದಲೇ ಗೇಟ್ ಗಳ ಟ್ರಯಲ್ ನಡೆಯುತ್ತಿದೆ. ಚೆನ್ನೈನಲ್ಲಿ ಹೊಸ ಚೈನ್ ಗಳ ತಯಾರಿಕೆ ನಡೆಯುತ್ತಿದೆ. ಎಪ್ರಿಲ್ ಅಂತ್ಯಕ್ಕೆ ಚೈನ್ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.