ಕುರುಗೋಡು ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯರ ಮಠದಲ್ಲಿ ಅಮೃತ ಶಿಲಾಮೂರ್ತಿ ಪ್ರತಿಷ್ಠ್ಠಾಪನೆ ಕಾರ್ಯಕ್ರಮದಲ್ಲಿ ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರು, ಕಲ್ಯಾಣ ಮಹಾಸ್ವಾಮಿ, ಸೂಗೂರೇಶ್ವರ ಶ್ರೀಗಳು ಇದ್ದರು.  
ವಿಜಯನಗರ

ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಗಳು ನಿರಂತರವಾಗಿರಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕಲ್ಯಾಣ ಮಹಾಸ್ವಾಮಿ ಆಶೀರ್ವಚನ
  • ಕುರುಗೋಡು ರಾಘವಾಂಕ ಸ್ವಾಮಿ ಮಠ ಶಿಲಾಮೂರ್ತಿ ಪ್ರತಿಷ್ಠಾಪನೆ
ಕುರುಗೋಡು; ಶ್ರೀಮಠದಲ್ಲಿ ವಿಶ್ವಗುರು ಬಸವಣ್ಣ ಮತ್ತು ರೇಣುಕಾಚಾರ್ಯ ಜಯಂತಿ ಅದ್ದೂರಿಯಾಗಿ ಆಚರಿಸುವ ಮೂಲಕ ಗುರು-ವಿರಕ್ತರನ್ನು ಒಂದೇ ದೃಷ್ಟಿಕೋನದಲ್ಲಿ ನೋಡಿದ ಧೀಮಂತ ಮಠಾಧೀಶರಲ್ಲಿ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯರು ಒಬ್ಬರು ಎಂದು ಶ್ರೀ ಕಲ್ಯಾಣ ಮಹಾಸ್ವಾಮಿ ಬಣ್ಣಿಸಿದರು.
ರಾಘವಾಂಕ ಸ್ವಾಮಿಗಳ ಹಾವಿಗೆ ಮಠದಲ್ಲಿ ಆಯೋಜಿಸಿದ್ದ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪುರಾಣ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ರಾಘವಾಂಕ ಪಂಡಿತಾರಾಧ್ಯ ಶ್ರೀಗಳ ಪರಿಶ್ರಮದ ಫಲವಾಗಿ ಶ್ರೀಮಠ ಸರ್ವತೋಮುಖ ಅಭಿವೃದ್ಧಿಯಾಗಿದೆ. ಭಕ್ತರೂ ಅವರ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಅವರ ಆಶಯದಂತೆ ಮಠದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿ ಎಂದು ಆಶಿಸಿದರು.
ಸೂಗೂರೇಶ್ವರ ಶ್ರೀಗಳು ಮಾತನಾಡಿ, ಗುರುವಿನ ಕರ್ತೃ ಗದ್ದುಗೆ ಮೇಲೆ ಶಿಲಾಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿರುವ ಶಿಷ್ಯಬಳಗಕ್ಕೆ ಗುರುವಿನ ಪ್ರೇರಣೆಯಾಗಿದೆ. ಮುಂದಿನ ಪೀಳಿಗೆಗೆ ಶ್ರೀಗಳನ್ನು ಪರಿಚಯಿಸುವ ಕೆಲಸ ಮಾಡಿದ ಸೇವಾಸಮಿತಿ ಕಾರ್ಯ ಶ್ಲಾಘನೀಯ ಎಂದರು.

ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ 11 ದಿನಗಳ ಕಾಲ ಜರುಗಿದ ಹೇಮರಡ್ಡಿ ಮಲ್ಲಮ್ಮ ಪುರಾಣ ಸಂಪನ್ನಗೊಂಡಿತು. ವಿಶ್ವನಾಥ ಶಾಸಿ ಪುರಾಣ ಪ್ರವಚನ ನೀಡಿದರು. ರೇಣುಕಾರಾಜ ಗವಾಯಿ ಪುರಾಣ ಪಠಣ ಮತ್ತು ಸಂಗೀತ ಸೇವೆ ಸಲ್ಲಿಸಿದರು. ಜಿ.ಸುಧಾಕರ್ ತಬಲಾ ಸಾಥ್ ನೀಡಿದರು. ರಾಘವಾಂಕ ಪಂಡಿತಾರಾಧ್ಯ ಸೇವಾ ಸಮಿತಿಯ ಕಾರ್ಯದರ್ಶಿ ಎಸ್.ಎಂ. ಶಿವರುದ್ರಯ್ಯ ಸ್ವಾಮಿ, ಪ್ರಮುಖರಾದ ಕೆ.ಎಂ. ಪಂಚಾಕ್ಷರಿಸ್ವಾಮಿ, ಪಾಲಾಕ್ಷಿ ಗೌಡ, ಸದಾಶಿವ ಸ್ವಾಮಿ, ಚಂದ್ರಶೇಖರ, ಎಸ್.ಸದಾನಂದ ಗೌಡ, ಎಚ್.ಎಂ.ಶೇಖರಯ್ಯಸ್ವಾಮಿ, ಮೂಗುತಿ ಸುರೇಶ್, ಹೂಗಾರ್ ಯೋಗೇಶ್, ಬಳೆಗಾರ ಪಂಪಾಪತಿ, ಕುಂಬಾರ ದೊಡ್ಡಪ್ಪ ಇದ್ದರು.