ಕನ್ನಡ ವಿವಿಯ ಪಂಪಾ ಸಭಾಂಗಣದಲ್ಲಿ ಬುಧವಾರ ನಡೆದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು. ಹಂಪಿ ಸಿಪಿಐ ರಾಜೇಶ್ ಬಟಗುರ್ಕಿ, ವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸಂಚಾಲಕ ಡಾ.ಎ.ಶ್ರೀಧರ್ ಇದ್ದರು. 
ವಿಜಯನಗರ

ಮಾನವ ಹಕ್ಕುಗಳು ಪ್ರತಿಯೊಬ್ಬರಿಗೆ ಬೆಳಕಾಗಲಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಮಾನವ ಹಕ್ಕುಗಳ ದಿನಾಚರಣೆಲ್ಲಿ ವಕೀಲ ಕೆ.ಜಂಬಣ್ಣ ಸಲಹೆ
ಹೊಸಪೇಟೆ: ಜೀವ ಸಂಕುಲಕ್ಕೆ ಸ್ವತಂತ್ರ ನೀಡಲು 1948 ಡಿ.10ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗವನ್ನು ಘೋಷಣೆ ಮಾಡಿತು ಎಂದು ನಗರದ ವಕೀಲ ಕೆ.ಜಂಬಣ್ಣ ಹೇಳಿದರು.
ರಾಷ್ಟಿçÃಯ ಸೇವಾ ಯೋಜನೆ ಘಟಕ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಿಂದ ಕನ್ನಡ ವಿವಿಯ ಪಂಪಾ ಸಭಾಂಗಣದಲ್ಲಿ ಬುಧವಾರ ನಡೆದ ಮಾನವ ಹಕ್ಕುಗಳ ದಿನಾಚರಣೆ ಮಾತನಾಡಿದರು.
ಮಾನವ ಹಕ್ಕುಗಳ ಚಿಂತನೆಯು ಪ್ರತಿಯೊಬ್ಬರ ಜೀವನದಲ್ಲಿ ಬೆಳಕಾಗಬೇಕು. ಸಮಾಜದಲ್ಲಿ ಮಾನವ ಹಕ್ಕುಗಳ ತಿಳುವಳಿಕೆ ಮೂಡಿಸುವುದು ಮಾನವ ಹಕ್ಕುಗಳ ದಿನಾಚರಣೆಯ ಉದ್ದೇಶವಾಗಿದೆ. ಅರಿಸ್ಟಾಟಲ್, ಪ್ಲೇಟೋ ಮತ್ತು ಬಸವಣ್ಣನವರಿಂದ ಅಂಬೇಡ್ಕರ್ ಸಂವಿಧಾನದವರೆಗೂ ನಾಗರಿಕರಲ್ಲಿ ಸಮಾನತೆಯ ಮನೋಭಾವನೆಯನ್ನು ಮೂಡಿಸುವುದು ಮಾನವ ಹಕ್ಕುಗಳ ಗುರಿಯಾಗಿದೆ ಎಂದರು.
ಹAಪಿ ಸಿಪಿಐ ರಾಜೇಶ್ ಬಟಗುರ್ಕಿ ಮಾತನಾಡಿ, ಲಿಂಗ, ಜಾತಿ, ವರ್ಣ ಯಾವುದೇ ರೀತಿಯಲ್ಲಿ ಭೇದ ಮಾಡದೆ ಎಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸಿಕೊಳ್ಳಬೇಕು. ಯುವ ಪೀಳಿಗೆಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದರು.
ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ಮಾತನಾಡಿ, ಸಂವಿಧಾನವು ವಿವಿಧ ಹಕ್ಕುಗಳನ್ನು ನೀಡಿದ್ದು, ಈ ಹಕ್ಕುಗಳು ದುರುಪಯೋಗ ಆಗದೆ ಇರುವ ರೀತಿಯಲ್ಲಿ ಮಾನವ ಹಕ್ಕುಗಳ ಆಯೋಗ ನೋಡಿಕೊಳ್ಳುತ್ತದೆ. ಸಮಾಜವು ಎಷ್ಟೇ ಮುಂದುವರೆದರೂ ಹಿಂದಿನAತೆ ಮಹಿಳೆಯರ ಮೇಲಿನ ತಿರಸ್ಕಾರ, ದಬ್ಬಾಳಿಕೆ, ಶೋಷಣೆ ನಡೆಯುತ್ತಿದ್ದು ಪ್ರಮುಖವಾಗಿ ಮಹಿಳೆಯರು ಮಾನವ ಹಕ್ಕುಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರು.