ಕೊಟ್ಟೂರು ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ದತ್ತಿ ದಾಸೋಹಿ ಅಮೃತ ಭದ್ರ ಶೆಟ್ಟಿ ಅವರನ್ನ ಸನ್ಮಾನಿಸಿದರು. ಕಟ್ಟೆಮನಿ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯ, ಪ್ರಮುಖರಾದ ಅಂಗಡಿ ಪಂಪಾಪತಿ, ದೇವರಮನಿ ಕರಿಯಪ್ಪ ,ಭದ್ರ ಶೆಟ್ಟಿ ಅಕ್ಕಮಹಾದೇವಿ, ಭದ್ರ ಶೆಟ್ಟಿ ರಾಜೇಶ್ವರಿ ಇತರರಿದ್ದರು. 
ವಿಜಯನಗರ

ಎಲ್ಲರೂ ಶರಣರ ಮಾರ್ಗದಲ್ಲಿ ನಡೆಯಿರಿ

ಪ್ರಮುಖ ಮುಖ್ಯಾಂಶಗಳು

  • ನೆಮ್ಮದಿ
  • ಜೀವನ
  • ದಾರ್ಶನಿಕ
ಕೊಟ್ಟೂರು: ಜಗತ್ತಿನ ಸರ್ವ ಶ್ರೇಷ್ಠ ದಾರ್ಶನಿಕರಲ್ಲಿ ವಿಶ್ವಗುರು ಬಸವಣ್ಣ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಕಟ್ಟೆಮನಿ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಭೂತ ಭುಜಂಗ ಸ್ವಾಮಿ ಮಠದಲ್ಲಿ ಸೋಮವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ ಭದ್ರ ಶೆಟ್ಟಿ ಕೊಟ್ರಬಸಪ್ಪ ಮತ್ತು ಭದ್ರಶೆಟ್ಟಿ ಶಾರದಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉದ್ಯಮಿ ಅಂಗಡಿ ಪಂಪಾಪತಿ ಮಾತನಾಡಿ, ದುಡಿಮೆಯ ಒಂದು ಭಾಗವನ್ನು ಶರಣ ಸಾಹಿತ್ಯ ಪ್ರಸಾರ ಪ್ರಚಾರಕ್ಕೆ ಬಳಸಿದರೆ ಜೀವನ ಸಾರ್ಥಕವಾಗುತ್ತದೆ. ಶರಣರ ಮಾರ್ಗದಲ್ಲಿ ನಡೆದರೆ ನೆಮ್ಮದಿ ಜೀವನ ನಮ್ಮದಾಗುತ್ತದೆ ಎಂದರು.
ವಿಜಯನಗರ ಜಿಲ್ಲಾ ಶಸಾಪ ಪ್ರಧಾನ ಕಾರ್ಯದರ್ಶಿ ಎನ್ ಎಂ ರವಿಕುಮಾರ್, ಶಸಾಪ ಪ್ರಧಾನ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ, ತಾಲೂಕು ಶಸಾಪ ಅಧ್ಯಕ್ಷ ದೇವರಮನಿ ಕರಿಯಪ್ಪ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ ಸುಜಾತಾ, ತಾಲೂಕು ಯುವ ಘಟಕದ ಅಧ್ಯಕ್ಷ ಜೆ ಎಂ ಸುಧೀಂದ್ರ ಮಾತನಾಡಿದರು.
ಶಿಕ್ಷಕ ಕೋಡಿಹಳ್ಳಿ ವೀರಭದ್ರಪ್ಪ ಅವರು ಜೇಡರ ದಾಸಿಮಯ್ಯನವರ ವಚನಗಳ ಚಿಂತನೆಗಳು ಕುರಿತು ಉಪನ್ಯಾಸ ನೀಡಿದರು. ದತ್ತಿ ದಾಸೋಹಿಗಳಾದ ಜೀವನ ಗೌಡ, ವಾಮದೇವಪ್ಪ, ಭದ್ರ ಶೆಟ್ಟಿ ಚನ್ನ ವೀರೇಶ, ಶಿಕ್ಷಕರಾದ ಮತ್ತಿಹಳ್ಳಿ ನಾಗರಾಜ, ಕೆಎ ಕೊಟ್ರೇಶಪ್ಪ, ಸಹಕಾರ್ಯದರ್ಶಿ ಜಿ.ಸಿದ್ದಣ್ಣ, ಬಿ.ಎಂ ಗಿರೀಶ, ಜಿ.ಮಲ್ಲಿಕಾರ್ಜುನ, ಎಚ್.ಪಂಪಾಪತಿ, ಡಿ.ಪಿನಾಕಪಾಣಿ, ಡಿ.ಕೊಟ್ರೇಶ, ಪತ್ರಿಕಾ ವಿತರಕ ಡಿ. ಮಲ್ಲಿಕಾರ್ಜುನ ಇತರರಿದ್ದರು.