ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಮತ್ತುಇತರೆಡೆನಡೆದನಾನಾಕಳ್ಳತನಪ್ರಕರಣಗಳನ್ನು ಭೇದಿಸಿರುವ ಪೊಲೀಸ್ತಂಡಗಳು,7 ಜನಆರೋಪಿಗಳನ್ನು ಬಂಧಿಸಿ,24.75 ಲಕ್ಷರೂ.,ಮೌಲ್ಯದಚಿನ್ನಾಭರಣ ಸೇರಿದಂತೆ 15 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದುಎಸ್ಪಿಎಸ್.ಜಾಹ್ನವಿ ತಿಳಿಸಿದರು.
ನಗರದಜಿಲ್ಲಾಪೊಲೀಸ್ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿನಪಟ್ಟಣಪೊಲೀಸ್ಠಾಣೆಯಲ್ಲಿ ಏ.20ರಂದು ದಾಖಲಾಗಿದ್ದ ಪ್ರಕರಣದಲ್ಲಿ ಎಸ್.ಶ್ರೀನಿವಾಸ (23) ಮತ್ತುಕಾನೂನುಸಂಘರ್ಷಕ್ಕೆ ಒಳಗಾದಬಾಲಕನನ್ನು ಬಂಧಿಸಿ,11 ಲಕ್ಷರೂ.ಮೌಲ್ಯದ6 ಮೋಟಾರ್ಸೈಕಲ್ಗಳು ಹಾಗೂ 33 ಗ್ರಾಂಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹರಪನಹಳ್ಳಿ ಪೊಲೀಸ್ಠಾಣೆಯಲ್ಲಿ ಫೆ.07ರಂದು ತರಳಬಾಳು ಕಲ್ಯಾಣಮಂಟಪದಲ್ಲಿ ನಡೆದಕಳ್ಳತನಪ್ರಕರಣದಲ್ಲಿ ಮಧ್ಯಪ್ರದೇಶದ ವಾಖರ್ಅಹಮ್ಮದ್ ಶೇಖ್(36) ಮತ್ತುದಾವಣಗೆರೆಯ ಭಾಷಅಲಿಯಾಸ್ ಮುಜಾವರ್ ಜಾಫರ್(23) ಎಂಬುವರನ್ನು ಬಂಧಿಸಿ,3.50 ಲಕ್ಷರೂ.ಮೌಲ್ಯದಚಿನ್ನಾಭರಣಗಳನ್ನು ಜಪ್ತಿಮಾಡಲಾಗಿದೆ.
ಇಲ್ಲಿನಚಿತ್ತವಾಡಗಿ ಪೊಲೀಸ್ಠಾಣೆವ್ಯಾಪ್ತಿಯ ಸಿದ್ಧಿಪ್ರಿಯಾ ಕಲ್ಯಾಣಮಂಟಪದಲ್ಲಿ ಮೇ28 ರಂದುನಡೆದಿದ್ದ ಕಳ್ಳತನಪ್ರಕರಣದಲ್ಲಿ ನಗರದಹೊಸಅಮರಾವತಿಯ ಬಿ.ವಿ.ಗುರುರಾಜ್ (26) ಎಂಬಾತನನ್ನು ಬಂಧಿಸಿ,2.50 ಲಕ್ಷರೂ.ಮೌಲ್ಯದ17.75 ಗ್ರಾಂ.,ಚಿನ್ನದಕಿವಿಓಲೆಗಳನ್ನು ವಶಕ್ಕೆಪಡೆಯಲಾಗಿದೆ. ಜತೆಗೆಜು.07ರಂದು ದಾಖಲಾಗಿದ್ದ ಪ್ರಕರಣದಲ್ಲಿ ಗಂಗಾವತಿಯ ಸೈಯದ್ಮೆಹಬೂಬ್ ಖಾದ್ರಿಎಂಬಆರೋಪಿಯನ್ನು ಬಂಧಿಸಿ,4.75 ಲಕ್ಷರೂ.ಮೌಲ್ಯದ9 ಮೋಟಾರ್ಸೈಕಲ್ಗಳನ್ನು ಜಪ್ತಿ ಮಾಡಲಾಗಿದೆ. ಹೂವಿನಹಡಗಲಿಪೊಲೀಸ್ಠಾಣೆಯಲ್ಲಿ ಜೂ.22ರಂದು ಮೀರಾಕೊರನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕಳ್ಳತನಪ್ರಕರಣದಲ್ಲಿ ಕೋಟೇಶಹುಲಿಕಟ್ಟಿ (28) ಎಂಬಆರೋಪಿಯನ್ನು ಬಂಧಿಸಿ,3 ಲಕ್ಷರೂ.ಮೌಲ್ಯದ52 ಗ್ರಾಂ.,ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದುತಿಳಿಸಿದರು.
ಈಸರಣಿಕಾರ್ಯಾಚರಣೆಗಳ ಮೂಲಕಪೊಲೀಸರು ಜಿಲ್ಲೆಯ ಪೊಲೀಸರು ಭೇದಿಸಿರುವ ಎಲ್ಲಪ್ರಕರಣಗಳಲ್ಲಿ ಒಟ್ಟು7 ಆರೋಪಿಗಳನ್ನು ಬಂಧಿಸಿದ್ದು, 13.60 ಲಕ್ಷ ರೂ.ಮೌಲ್ಯದಚಿನ್ನಾಭರಣಗಳು ಹಾಗೂ11.15 ಲಕ್ಷರೂ.,ಮೌಲ್ಯದಬೈಕ್ಗಳು ಸೇರಿ 24.75 ಲಕ್ಷ ರೂ.,ಮೌಲ್ಯದಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಗಳನ್ನು ಕೈಗೊಂಡವಿಶೇಷಪೊಲೀಸ್ತಂಡಗಳಕಾರ್ಯವೈಖರಿಯನ್ನು ಎಸ್ಪಿಎಸ್.ಜಾಹ್ನವಿ ಅವರು ಶ್ಲಾಘಿಸಿದ್ದಾರೆ.