ಹೊಸಪೇಟೆ ಅನಂತಶಯನಗುಡಿಯ ಶ್ರೀ ಗುರುಗಾದಿಲಿಂಗೇಶ್ವರ ಮಠದಲ್ಲಿ ಭಾನುವಾರ ಟಿತಿeಜ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಗುರುಗಾದಿಲಿಂಗೇಶ್ವರ ಭಾವಚಿತ್ರಕ್ಕೆ ಪೂಜೆ ಮಾಡಿ, ಗೌರವ ಸಲ್ಲಿಸಲಾಯಿತು. ಕೊಟ್ಟೂರು ಸಂಸ್ಥಾನ ಮಠದ ನಿರಂಜನ ಕೊಟ್ಟೂರು ಬಸಲಿಂಗ ಸ್ವಾಮೀಜಿ, ಕನಕ ಗುರು ಪೀಠ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮಿ, ಹಂಪಿ ಶ್ರೀ ಮಾತಂಗ ಮಹರ್ಷಿ ಆಶ್ರಮದ ಶ್ರೀ ಪುರ್ಣಾನಂದ ಭಾರತಿ ಸ್ವಾಮಿ, ಗಂಗಾವತಿಯ ಶ್ರೀ ಗವಿಸಿದ್ದೇಶ್ವರ ಸ್ವಾಮಿ, ರಾಜ್ಯ ರೈತ ಹಸಿರಿಕರಣ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಗಂಟೆ ಸೋಮಶೇಖರ್ ಇತರರಿದ್ದರು. 
ವಿಜಯನಗರ

ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕೊಟ್ಟೂರು ಸಂಸ್ಥಾನ ಮಠದ ನಿರಂಜನ ಕೊಟ್ಟೂರು ಬಸಲಿಂಗ ಸ್ವಾಮೀಜಿ ಸಲಹೆ
ಹೊಸಪೇಟೆ: ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ ಎಂದು ಇಲ್ಲಿನ ಕೊಟ್ಟೂರು ಸಂಸ್ಥಾನ ಮಠದ ನಿರಂಜನ ಕೊಟ್ಟೂರು ಬಸಲಿಂಗ ಸ್ವಾಮೀಜಿ ತಿಳಿಸಿದರು.
ರಾಜ್ಯ ರೈತ ಹಸಿರಿಕರಣ ಸಾಂಸ್ಕೃತಿಕ ಟ್ರಸ್ಟ್ನಿಂದ ನಗರದ ಅನಂತಶಯನಗುಡಿಯ ಶ್ರೀ ಗುರುಗಾದಿಲಿಂಗೇಶ್ವರ ಮಠದಲ್ಲಿ ಭಾನುವಾರ ನಡೆದ 07 ಸಾಮೂಹಿಕ ವಿವಾಹ ಹಾಗೂ ರಕ್ತದಾನ ಶಿಭಿರದಲ್ಲಿ ಮಾತನಾಡಿದರು.
ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಆದರ್ಶ. ಇದು, ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧ್ದಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದರು.
ಕನಕ ಗುರು ಪೀಠ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮಿ, ಹಂಪಿ ಶ್ರೀ ಮಾತಂಗ ಮಹರ್ಷಿ ಆಶ್ರಮದ ಶ್ರೀ ಪುರ್ಣಾನಂದ ಭಾರತಿ ಸ್ವಾಮಿ, ಗಂಗಾವತಿಯ ಶ್ರೀ ಗವಿಸಿದ್ದೇಶ್ವರ ಸ್ವಾಮಿ, ರಾಜ್ಯ ರೈತ ಹಸಿರಿಕರಣ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಗಂಟೆ ಸೋಮಶೇಖರ್, ಪ್ರಮುಖರಾದ ಅಯ್ಯಾಳಿ ತಿಮ್ಮಪ್ಪ, ಡಾ.ಧರ್ಮೆಂದ್ರಗೌಡ, ಎನ್.ಕೆ.ದೀಪಾಲಿ ನಾರಾಯಣ ಶೆಟ್ಟರು, ಎನ್.ಕೆ.ರಾಮು, ವಿ.ಕೆ.ಪಂಪಾಪತಿ, ಲೆಕ್ಚರ್ ಕಿನ್ನೂರಯ್ಯ, ರಶ್ಮಿರಾಜಶೇಖರ್ ಹಿಟ್ನಾಳ್, ಅಯ್ಯಾಳಿ ಶಂಕ್ರಪ್ಪ, ಕಪ್ಲಿ ಹನುಮಂತಪ್ಪ, ಅವಿನಾಶ್ ಇತರರಿದ್ದರು.