ಮರಿಯಮ್ಮನಹಳ್ಳಿ ಸಮೀಪದ 114 ಡಣಾಪುರ ಗ್ರಾಮದಲ್ಲಿ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ್ ನಾಯ್ಕ ಉದ್ಘಾಟಿಸಿದರು.  
ವಿಜಯನಗರ

ಸಾಮೂಹಿಕ ವಿವಾಹ ಸಾರ್ಥಕ ಕಾರ್ಯ

ಅಶೋಕ್ ಕುಮಾರ್ ಎನ್

ಪ್ರಮುಖ ಮುಖ್ಯಾಂಶಗಳು

  • mass marriage
ಮರಿಯಮ್ಮನಹಳ್ಳಿ: ಡಣಾಪುರದಲ್ಲಿ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಸಮಿತಿ ಕಳೆದ 25 ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿ ಸಾರ್ಥಕ ಕಾರ್ಯ ಮಾಡಿದೆ ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಪ್ರಶಂಸಿದರು.
114 ಡಣಾಪುರ ಗ್ರಾಮದಲ್ಲಿ ಕಲಬುರಗಿ ಶ್ರೀ ಶರಣಬಸವೇಶ್ವರ ಸ್ವಾಮಿಯ 25ನೇ ವರ್ಷದ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದರು.
ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮೂಹಿಕ ವಿವಾಹಗಳು ಸಾಲದಿಂದ ಮುಕ್ತವಾಗಿರಲು ಸರಳ ಮಾರ್ಗವಾಗಿದೆ. ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿದ್ದು, ಸಮಾಜದಲ್ಲಿ ಸಮಾನತೆ, ಸಹಕಾರ, ಸಹಬಾಳ್ವೆ ಬರಬೇಕಾದರೆ ಸಾಮೂಹಿಕ ಮದುವೆ ಅಗತ್ಯವಾಗಿದೆ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದವರು ಪುಣ್ಯವಂತರಾಗಿದ್ದಾರೆ. ಇಂತಹ ವೇದಿಕೆಗಳಲ್ಲಿ ಹರಗುರುಶರಣರ ಸಾನ್ನಿಧ್ಯವಿರುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲು ಸಂಕೋಚ, ಮುಜುಗರ ಪಡಬಾರದು. ಸ್ತ್ರೀ ಮಹಾಲಕ್ಷ್ಮೀ ಸ್ವರೂಪವಾಗಿದ್ದು, ಯಾವುದೇ ಕಾರಣಕ್ಕೂ ಮಹಿಳೆಯರ ಮನಸ್ಸು ನೋಯಿಸದಿರಿ. ತಂದೆ-ತಾಯಿಯಂತೆ ಅತ್ತೆ-ಮಾವನನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ಮಾಡಿದರು.
10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನಂತರ ವೀರೇಶ್ವರ ಪುಣ್ಯಾಶ್ರಮದ ಕಲ್ಯಯ್ಯಜ್ಜ ಅವರ 2970 ನೇ ತುಲಾಭಾರ ಹಾಗೂ ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ನಡೆಯಿತು.
ನಾಗಲಾಪುರದ ನಿರಂಜನ ಪ್ರಭು ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಪ್ರಮುಖರಾದ ಎಸ್.ಕೃಷ್ಣನಾಯ್ಕ, ಕಿಚಿಡಿ ಕೊಟ್ರೇಶ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ದುರುಗಮ್ಮ, ಮೈರಾಡ ಸಂಸ್ಥೆಯ ವೆಂಕಟರೆಡ್ಡಿ ಎಸ್.ಗಿರಣಿ, ಗ್ರಾಪಂ ಸದಸ್ಯರಾದ ಪಾರ್ವತಮ್ಮ ಹನುಮಂತಪ್ಪ, ಬಿ. ಬಸವರಾಜ, ಕೆ.ಎಂ.ಮಂಜಯ್ಯಸ್ವಾಮಿ, ಎನ್.ದಾಸಪ್ಪ, ಜ್ಯೋತಿ ಯಮನೂರ, ಪ್ರಮುಖರಾದ ನಿಂಗಪ್ಪ, ಷಣ್ಮುಖ, ಈರಪ್ಪ, ಭರತ್, ರಾಘವೇಂದ್ರ, ಓಬಜ್ಜ, ರಾಜಪ್ಪ, ಗುಂಡಾ ಸೋಮಣ್ಣ, ಗುಂಡಾ ಕೃಷ್ಣ, ವೇಣುಗೋಪಾಲ, ಕುರಿ ಹುಲುಗಪ್ಪ, ಪುರಾಣ ಸಮಿತಿ ಪದಾಧಿಕಾರಿಗಳಿದ್ದರು.