ಕಾನಹೊಸಹಳ್ಳಿ ಸಮೀಪದ ಬಣವಿಕಲ್ಲು ಗ್ರಾಮದ ಸಹಿಪ್ರಾ ಶಾಲೆಯಲ್ಲಿ ದಾಖಲಾತಿ ಆಂದೋಲನ ಹಾಗೂ ಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಉದ್ಘಾಟಿಸಿದರು.  
ವಿಜಯನಗರ

ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿ

ಅಶೋಕ್ ಕುಮಾರ್ ಎನ್
ಕಾನಹೊಸಹಳ್ಳಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಬಣವಿಕಲ್ಲು ಗ್ರಾಮದ ಸಹಿಪ್ರಾ ಶಾಲೆಯಲ್ಲಿ ದಾಖಲಾತಿ ಆಂದೋಲನ ಹಾಗೂ ಶಾಲಾ ಆರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳಿಸಬೇಕು. ಮಕ್ಕಳ ಉತ್ತಮ ಭವಿಷ್ಯಕ್ಕೆ ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ಬದ್ಧವಾಗಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಮಾತನಾಡಿ, ಸರ್ಕಾರದಿಂದ ನಮ್ಮ ತಾಲೂಕಿಗೆ ಹೆಚ್ಚಿನ ಸರ್ಕಾರಿ ಪಬ್ಲಿಕ್ ಶಾಲೆಗಳು, ದ್ವಿ ಭಾಷಾ ಮಾಧ್ಯಮ ಶಾಲೆಗಳು, ಎಲ್‌ಕೆಜಿ ಮತ್ತು ಯುಕೆಜಿ ಶಾಲೆಗಳು, ಪ್ರೌಢಶಾಲೆಗಳು ಮಂಜೂರು ಅಗಿದ್ದು, ಶಾಸಕರ ಶಿಕ್ಷಣದ ಕಾಳಜಿಯಿಂದ ಹೆಚ್ಚಿನ ಅನುಕೂಲ ಆಗಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಪಾಪಣ್ಣ, ಎಪಿಎಂಸಿ ಸದಸ್ಯ ಲಿಂಗನಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ್, ತಳವಾರ ಶರಣಪ್ಪ, ಬಣವಿಕಲ್ಲು ಎರ‌್ರಿಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಪಿ.ಬಸವರಾಜ್, ಸಾಮಿಲ್ ಆನಂದ, ಸಿದ್ದಣ್ಣ, ಅಲ್ಲಭಕ್ಷಿ, ಕುಬೇರಗೌಡ್ರು, ಚೌಡೇಶ, ಪಾಪಣ್ಣ, ಪಾಲೇಶ್, ರಾಜಸಾಬ್, ಕಾರ್ತಿಕ್, ಪಿಡಿಒ ಶಾಂತಕುಮಾರಿ, ಸಿಆರ್‌ಪಿ ಮಹಾಂತೇಶ್ ಇದ್ದರು.