ಹೊಸಪೇಟೆಯಲ್ಲಿ ಶುಕ್ರವಾರ ಕಲಾವಿದೆ ಡಾ.ಕೆ.ನಾಗರತ್ನಮ್ಮ ನಾ.. ಏರಿದ ಎತ್ತರಕ್ಕೆ ಸ್ತ್ರೀ ಸಂವೇದನೆಯ ಆತ್ಮಕಥನಗಳ ಕೃತಿ ಲೋಕಾರ್ಪಣೆಗೊಳಿಸಿದರು. ಕಾಲೇಜಿನ ಜಂಟಿ ಕಾರ್ಯದರ್ಶಿ ಅಶೋಕ್ ಜೀರೆ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ, ವಿಜಯನಗರ ಪ್ರತಿಷ್ಠಾನದ ಜಿಲ್ಲಾ ಅಧ್ಯಕ್ಷ ದಿವಾಕರ ನಾರಾಯಣ ಇತರರಿದ್ದರು. 
ವಿಜಯನಗರ

ವೃತ್ತಿಯ ಜತೆಗೆ ಕಲೆಯನ್ನು ಪ್ರವೃತ್ತಿಯಾಗಿಸಿಕೊಳ್ಳಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ನಾ.. ಏರಿದ ಎತ್ತರಕ್ಕೆ ಕೃತಿ ಲೋಕಾರ್ಪಣೆಯಲ್ಲಿ ಡಾ.ಕೆ.ನಾಗರತ್ನಮ್ಮ ಕರೆ
ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ರಂಗಕಲೆಯನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯೊಂದಿಗೆ ಪ್ರವೃತ್ತಿಯನ್ನಾಗಿಯೂ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಡಾ.ಕೆ.ನಾಗರತ್ನಮ್ಮ ಅಭಿಪ್ರಾಯಪಟ್ಟರು.
ವಿಜಯನಗರ ಪ್ರತಿಷ್ಠಾನದಿಂದ ಖಾಸಗಿ ಕಾಲೇಜಿನಲ್ಲಿ ಶುಕ್ರವಾರ ದೇವಯಾನ ಕಾವ್ಯನಾಮದ ಡಾ.ದೇವಿಕಾ ಎಸ್. ಅವರ ನಾ.. ಏರಿದ ಎತ್ತರಕ್ಕೆ ಸ್ತ್ರೀ ಸಂವೇದನೆಯ ಆತ್ಮಕಥನಗಳ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಂಗಭೂಮಿ ತಮಗೆ ನೀಡಿದ ಪ್ರೀತಿ ಮತ್ತು ಸಂಪತ್ತು ಬೆಲೆಕಟ್ಟಲಾಗದ್ದು. ಡಾ. ದೇವಿಕಾ ಅವರ ಈ
ಕೃತಿಯು ಹೆಣ್ಣು ತನ್ನ ನೋವು, ನಲಿವು ಹಾಗೂ ತಲ್ಲಣಗಳ ನಡುವೆಯೂ ಕಳೆದುಹೋದದ್ದರಲ್ಲೇ ಹೊಸ ಬದುಕು ಕಟ್ಟಿಕೊಳ್ಳುವ ಸದಾಶಯವನ್ನು ಸಾರುತ್ತದೆ ಎಂದು ಶ್ಲಾಘಿಸಿದರು.
ಕೃತಿ ಪರಿಚಯಿಸಿದ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಆತ್ಮಕತೆಗಳು ಸ್ತ್ರೀ ಯಾತನೆಯ ವಿವಿಧ ರೂಪಗಳನ್ನು ಬಿಂಬಿಸುತ್ತವೆ. ದಿನಪತ್ರಿಕೆಯ ಅಂಕಣದಲ್ಲಿ ಪ್ರಕಟಗೊಂಡಿದ್ದ 15 ಸಾಧಕ ಮಹಿಳೆಯರ ಬದುಕಿನ ಸೂಕ್ಷ್ಮ ನೋಟವೇ ಈ ಕೃತಿ. ಇದು ಮಹಿಳೆಯರ ಯಾತನೆಯಷ್ಟೇ ಅಲ್ಲದೆ, ಪುರುಷನ ಆಕೃತಿ-ವಿಕೃತಿಗಳನ್ನು ಮತ್ತು ಮನುಷ್ಯ ಸಂಬAಧಗಳನ್ನು ಅರ್ಥಮಾಡಿಕೊಳ್ಳಲು ಪುರುಷರಿಗೂ ಪ್ರೇರಣೆಯಾಗಿದೆ ಎಂದರು.
ಕಾಲೇಜಿನ ಜಂಟಿ ಕಾರ್ಯದರ್ಶಿ ಅಶೋಕ್ ಜೀರೆ ಅಧ್ಯಕ್ಷತೆ ವಹಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ, ಪ್ರಾಂಶುಪಾಲೆ ಅನುಸೂಯ ಅಂಗಡಿ, ವಿಜಯನಗರ ಪ್ರತಿಷ್ಠಾನದ ಜಿಲ್ಲಾ ಅಧ್ಯಕ್ಷ ದಿವಾಕರ ನಾರಾಯಣ, ಪ್ರಮುಖರಾದ ಮಧುಮತಿ ಪಾಟೀಲ್, ನಾಗಭೂಷಣ, ಎಂಪಿಎA ಮಂಜುನಾಥ, ಎನ್.ನಾಗರಾಜ, ಹನುಮಂತಪ್ಪ, ಕೆ.ಕಲ್ಲಹಳ್ಳಿ ಇತರರಿದ್ದರು.