ಹೂವಿನಹಡಗಲಿ ತಾಲೂಕಿನ ರಾಜವಾಳದ ಸಮೀಪದ ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ನಿಂದ ಸೋಮವಾರ ನದಿಗೆ ನೀರು ಹರಿಸುತ್ತಿರುವುದು.  
ವಿಜಯನಗರ

ಚೆಂಡು ಹೂ-ಮೆಕ್ಕೆಜೋಳ ಬೆಳೆ ಜಲಾವೃತ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ಗೆ 90,500 ಕ್ಯೂಸೆಕ್ ಒಳ ಹರಿವು

ಹೂವಿನಹಡಗಲಿ: ತುಂಗಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಿದ್ದರಿಂದ ತಾಲೂಕಿನ ಬನ್ನಿಮಟ್ಟಿ ಹಾಗೂ ನಂದಿಗಾವಿ ಗ್ರಾಮಗಳ ವಿವಿಧ ಬೆಳೆಗಳು ಜಲಾವೃತಗೊಂಡಿವೆ.

ಅವಳಿ ಗ್ರಾಮಗಳಲ್ಲಿ 30 ಎಕರೆ ಚೆಂಡ ಹೂ, ಚೌಳಿಕಾಯಿ 5 ಎಕರೆ, ಮೆಕ್ಕೆಜೋಳ 25 ಎಕರೆ ಹಾಗೂ 10 ಎಕರೆ ಭತ್ತ ಗದ್ದೆ ಜಲಾವೃತವಾಗಿದೆ. ಕುರುವತ್ತಿ, ಮೈಲಾರ, ಹೊಸಹಳ್ಳಿ, ಅಂಗೂರು, ಕೋಟಿಹಾಳ, ಮಕರಬ್ಬಿ, ಬ್ಯಾಲಹುಣಸಿ ಸೇರಿದಂತೆ ನದಿ ತೀರದ ಪ್ರದೇಶದಲ್ಲಿ ರೈತರು ಅಳವಡಿಸಿದ್ದ ಮೋಟಾರ್ ಪಂಪ್‌ಗಳು ನೀರಿನಲ್ಲಿ ಮುಳುಗಿ ಹೋಗಿವೆ.

ರಾಜವಾಳ ಸಮೀಪ ನಿರ್ಮಾಣ ಮಾಡಿರುವ ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ಗೆ ಸೋಮವಾರ 90,500 ಕ್ಯೂಸೆಕ್ ಒಳ ಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬ್ಯಾರೇಜಿನ ಕೆಳ ಭಾಗದಲ್ಲಿ ರೈತರು ಹಾಗೂ ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.