ತುಂಗಭದ್ರಾ ಜಲಾಶಯಕ್ಕೆ ಟಿಬಿ ಮಂಡಳಿಯ ಅಧ್ಯಕ್ಷ ಎಸ್.ಎನ್.ಪಾಂಡೆ ಭೇಟಿ ನೀಡಿ ಹೊಸ ಗೇಟ್‌ಗಳ ಅಳವಡಿಕೆ ಕಾಮಗಾರಿ ಪರಿಶೀಲಿಸಿದರು. ಟಿಬಿಬಿ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಹಾಗೂ ಇಇ ನಾರಾಯಣ ನಾಯ್ಕ, ಎ.ಇ.ಚಂದ್ರಶೇಖರ ಇತರರಿದ್ದರು. 
ವಿಜಯನಗರ

ಗೇಟ್‌ಗಳ ಗುಣಮಟ್ಟ ಕಾಪಾಡಿ

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯಕ್ಕೆ ಅಧ್ಯಕ್ಷ ಎಸ್.ಎನ್.ಪಾಂಡೆ ಭೇಟಿ ನೀಡಿ ಸೂಚನೆ
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳ ಅಳವಡಿಕೆ ಕಾಮಗಾರಿ ಟಿಬಿ ಮಂಡಳಿಯ ಅಧ್ಯಕ್ಷ ಎಸ್.ಎನ್.ಪಾಂಡೆ ಗೇಟ್‌ಗಳ ಕಾಮಗಾರಿ ಮಂಗಳವಾರ ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಮಾತನಾಡಿದ ಅಧ್ಯಕ್ಷ ಎಸ್.ಎನ್.ಪಾಂಡೆ, ಗೇಟ್ ಅಳವಡಿಕೆಯಲ್ಲಿ ಗುಣಮಟ್ಟವನ್ನು ಕಾಪಡಬೇಕು. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
18ನೇ ಗೇಟ್ ಮಂಗಳವಾರ ಶೇ.30ರಷ್ಟು ಜೋಡಣೆಯಾಗಿವೆ. ಇನ್ನು 20ನೇ ಗೇಟ್ ಉಳಿದ ಭಾಗವನ್ನು ತೆರವು ಮಾಡಲಾಗಿದೆ. ಇನ್ನು ಉಳಿದ ಗೇಟ್ ಗಳ ತರವು ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ಪಾಂಡೆ ಅವರಿಗೆ ಮಾಹಿತಿ ನೀಡಿದರು.