ಹೊಸಪೇಟೆ ಭಾನುವಾರ ರಾತ್ರಿ ಬಳಿ ಪಲ್ಟಿಯಾಗಿರುವ ವಿಂಡ್ ಫ್ಯಾನ್ ಹೊತ್ತ ಸಾಗಿದ ಲಾರಿ 
ವಿಜಯನಗರ

ವಿಂಡ್ ಫ್ಯಾನ್ ಹೊತ್ತ ಸಾಗಿದ ಲಾರಿ ಪಲ್ಟಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ರಾಷ್ತ್ರೀಯ ಹೆದ್ದಾರಿ 50ರಲ್ಲಿ ಭಾರೀ ಟ್ರಾಫಿಕ್ ಜಾಮ್
ಹೊಸಪೇಟೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಟನಲ್ (ಸುರಂಗ) ಬಳಿ ಪವನ ವಿದ್ಯುತ್ ಘಟಕಕ್ಕೆ (ವಿಂಡ್ ಮಿಲ್) ಬಳಸುವ ಬೃಹತ್ ಗಾತ್ರದ ವಿಂಡ್ ಫ್ಯಾನ್ ರೆಕ್ಕೆಯನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಪಘಾತದ ತೀವ್ರತೆಗೆ ಬೃಹತ್ ರೆಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ, ಹೆದ್ದಾರಿಯಲ್ಲಿ ಸಂಪರ‍್ಣ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮವಾಗಿ ಕಿಲೋಮೀರ‍್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಶೇಷವಾಗಿ ನಗರದ ಕಡೆಯಿಂದ ಬೆಂಗಳೂರು, ದಾವಣಗೆರೆ ಮರ‍್ಗವಾಗಿ ಸಂಚರಿಸಬೇಕಿದ್ದ ನೂರಾರು ವಾಹನಗಳು ಮುಂದುವರಿಯಲಾರದೆ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಕ್ರೇನ್ಗಳ ಸಹಾಯದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಲಾರಿ ಹಾಗೂ ವಿಂಡ್ ಫ್ಯಾನ್ ರೆಕ್ಕೆಯನ್ನು ತೆರವುಗೊಳಿಸುವ ಕರ‍್ಯಾಚರಣೆ ಪ್ರಗತಿಯಲ್ಲಿದೆ. ಸದ್ಯ ಪೊಲೀಸರು ರ‍್ಯಾಯ ಮರ‍್ಗಗಳ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದಾರೆ.