ಹಂಪಿಯಲ್ಲಿ ದೆಹಲಿ ಬಾಂಬ್ ಪ್ರಕರಣ ಖಂಡಿಸಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು
- ಹಂಪಿಯಲ್ಲಿ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಕರೆ
- ಭಾರತ ದೇಶ ಶಾಂತಿಪ್ರೀಯವಾದ ದೇಶ
ಹೊಸಪೇಟೆ: ದೆಹಲಿಯ ಕೆಂಪು ಕೋಟೆ ಬಳಿ ಬಾಂಬ್ ಸ್ಟೋಟ ಪ್ರಕರಣ ಅಮಾನವೀಯ ಕೃತ್ಯ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಹಂಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ದೇಶದಲ್ಲಿ ಕ್ಷುದ್ರ ಶಕ್ತಿಗಳು, ಹಾಗೇ ಉಗ್ರ ಶಕ್ತಿಗಳು ಶಾಂತಿ- ಭದ್ರತೆ ವಿಧ್ವಂಸಗೊಳಿಸುವ ರೀತಿಯಲ್ಲಿ ಕೆಂಪುಕೋಟೆಯ ಬಳಿ ಮಹಾಸ್ಟೋಟ ಮಾಡಿದ್ದಾರೆ. ಇದು ಅತ್ಯಂದ ಖಂಡನೀಯ ವಿಚಾರವಾಗಿದೆ. ದೇಶದ ಭದ್ರತೆ ಮತ್ತು ಶಾಂತಿಯ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ನಾಯಕರು ಪಕ್ಷಾತೀತವಾಗಿ ಒಂದಾಗಬೇಕಿದೆ ಎಂದರು.
ನಮ್ಮ ಭಾರತ ಶಾಂತಿಪ್ರೀಯವಾದ ದೇಶವಾಗಿದೆ. ನಮ್ಮ ದೇಶ ತಾನಾಗೀಯೆ ಹೋಗಿ, ಯುದ್ಧ, ದಬ್ಬಾಳಿಕೆಯಾಗಲಿ, ಉಗ್ರವಾದವಾಗಿ ಮಾಡುವ ದೇಶವಲ್ಲ. ಯಾವುದೋ ದೇಶದ ಪ್ರೇರಣೆ ಪಡೆದು ಬಂದು ಇಲ್ಲಿ, ಇಂತಹ ಕೃತ್ಯ ಮಾಡಿದ್ದಾರೆ. ಇದನ್ನು ನಮ್ಮ ದೇಶ ಮತ್ತು ವಿಶ್ವ ಸಂಸ್ಥೆ ಒಟ್ಟುಗೂಡಿ ಈ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು. ದೇಶದ ಶಾಂತಿ ಭದ್ರತೆಗಾಗಿ ಶ್ರಮಿಸಬೇಕಿದೆ ಎಂದರು.